ಮಂಡ್ಯ : ಮದ್ದೂರು ಕಲ್ಲು ತೂರಾಟ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಜೊತೆಗೆ ಪ್ರಕರಣದ ‘ಕಿಂಗ್ ಪಿನ್’ ಫೋಟೋ ಕೂಡ ರಿವೀಲ್ ಆಗಿದೆ.
ಹೌದು, ಚನ್ನಪಟ್ಟಣದ ಇರ್ಫಾನ್ ಎಂಬಾತನೇ ಕಲ್ಲು ತೂರಾಟದ ಕಿಂಗ್ ಪಿನ್ ಎಂಬುದು ತಿಳಿದು ಬಂದಿದೆ. ಈತ ಹಲವು ವರ್ಷಗಳಿಂದ ಮದ್ದೂರಿನಲ್ಲಿ ವಾಸವಾಗಿದ್ದನು. ಈತ ಮಸೀದಿ ಮುಂದೆ ಗಣೇಶ ಮೆರವಣಿಗೆ ಬಗ್ಗೆ ಬಹಳ ಅಸಮಾಧಾನಗೊಂಡಿದ್ದನು ಎನ್ನಲಾಗಿದೆ. ಆದ್ದರಿಂದ ಕಲ್ಲು ತೂರಾಟ ನಡೆಸಿದ್ದನು ಎನ್ನಲಾಗಿದೆ. ಈತನನ್ನು ಜಾಫರ್ ಎಂಬಾತ ಪ್ರಚೋದಿಸಿದ್ದನು ಎನ್ನಲಾಗಿದೆ.
ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣ ಸಂಬಂಧ ಇದುವರೆಗೆ ಒಟ್ಟು 29 ಆರೋಪಿಗಳ ಗುರುತು ಪತ್ತೆಯಾಗಿದೆ . ಮದ್ದೂರು ಕಲ್ಲು ತೂರಾಟ ಪ್ರಕರಣ ಸಂಬಂಧ ಈಗಾಗಲೇ 22 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ 7 ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮತ್ತೊಂದೆಡೆ ಮದ್ದೂರು ಬೂದಿಮುಚ್ಚಿದ ಕೆಂಡದಂತಿದ್ದು, ಪಟ್ಟಣದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.