ನಟ ಕಿಚ್ಚ ಸುದೀಪ್ ಹೋಸ್ಟ್ ಮಾಡುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 12 ಸೆಪ್ಟೆಂಬರ್ 28ರಂದು ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಬಾರಿ ವೀಕ್ಷಕರಿಗೂ ಬಿಗ್ ಬಾಸ್ ಮನೆ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದೆ.
ಹೌದು, ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ‘ಬಿಗ್ ಬಾಸ್’ ಮನೆ ಪ್ರವೇಶಿಸುವ ಅದ್ಭುತ ಅವಕಾಶ ಕಲ್ಪಿಸಿದೆ.
ಪ್ರತಿ ದಿನ ಕಲರ್ಸ್ ಕನ್ನಡದಲ್ಲಿ ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ಪ್ರಸಾರವಾಗುವ ಧಾರಾವಾಹಿಗಳನ್ನು ವೀಕ್ಷಿಸಿ, ಕೊನೆಯಲ್ಲಿ ಕೇಳುವ ಪ್ರಶ್ನೆಗೆ Jio Hotstarನಲ್ಲಿ ಉತ್ತರಿಸಿ. ಅತೀ ಹೆಚ್ಚು ಸರಿಯುತ್ತರ ಕೊಟ್ಟ 100 ಲಕ್ಕಿ ವಿನ್ನರ್ ಗಳಲ್ಲಿ ನೀವೂ ಒಬ್ಬರಾಗಿ, ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬನ್ನಿ. ಬಿಗ್ ಬಾಸ್ ಮನೆಗೆ ಸ್ವಾಗತ ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ.
ರಾಜ್ಯದ ಜನತೆಗೊಂದು ಪತ್ರ!
— Colors Kannada (@ColorsKannada) September 10, 2025
ಬಿಗ್ ಬಾಸ್ GRAND OPENING | ಸೆಪ್ಟೆಂಬರ್ 28#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #CKEngage pic.twitter.com/SXrs7v8tkZ