ಮಂಗಳೂರು: ಗುಂಡಿಮಯ ರಸ್ತೆಯಲ್ಲಿ ಬೈಕ್ ನಿಂದ ಕೆಳಗೆ ಬಿದ್ದ ಮಹಿಳೆ ಮೇಲೆಯೇ ಕ್ಯಾಂಟರ್ ಲಾರಿ ಹರಿದು ಹೋಗಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೂಳೂರು ರಾಯಲ್ ಓಕೆ ಶೋರೂಂ ಮುಂಭಾಗ ಈ ಅಪಘಾತ ಸಂಭವಿಸಿದೆ. ಮಾಧವಿ ಮೃತ ಮಹಿಳೆ. ಉಡುಪಿಯ ಪರ್ಕಳ ಮೂಲದವರು. ಮಂಗಳೂರಿನ ಎ.ಜೆ. ಆಸ್ಪತ್ರೆ ಸಿಬ್ಬಂದಿಯಾಗಿರುವ ಮಾಧವಿ ಎಂದಿನಿಂದತೆ ಕೆಲಸಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ರಸ್ತೆಗುಂಡಿಯಲ್ಲಿ ಬೈಕ್ ಬಿದ್ದಿದೆ. ಆಯತಪ್ಪಿ ಕೆಳಗೆ ಬಿದ್ದ ಮಾಧವಿ ಮೇಲೆಯೇ ಕ್ಯಾಂಟರ್ ಲಾರಿ ಹರಿದು ಹೋಗಿದೆ.
ಸ್ಥಳದಲ್ಲೇ ಮಾಧವಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ಮಡೆಸಿದ್ದಾರೆ.