HomeLatest Newsಪ್ರವಾಸಿಗರಿಗೆ ಗುಡ್ ನ್ಯೂಸ್ : ಜೋಗ್ ಫಾಲ್ಸ್ , ಗೋಕಾಕ್ ಫಾಲ್ಸ್ ಗೆ ವಿಶೇಷ ಸಾರಿಗೆ...

ಪ್ರವಾಸಿಗರಿಗೆ ಗುಡ್ ನ್ಯೂಸ್ : ಜೋಗ್ ಫಾಲ್ಸ್ , ಗೋಕಾಕ್ ಫಾಲ್ಸ್ ಗೆ ವಿಶೇಷ ಸಾರಿಗೆ ಬಸ್ , ಇಲ್ಲಿದೆ ಸಂಪೂರ್ಣ ಮಾಹಿತಿ

ಬಳ್ಳಾರಿಯಿಂದ ಜೋಗ್ ಫಾಲ್ಸ್ ಮತ್ತು ಗೋಕಾಕ್ ಫಾಲ್ಸ್ ಪ್ರವಾಸಿ ತಾಣಗಳಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ ವಿಶೇಷ ವೇಗದೂತ ಸಾರಿಗೆ ಸೌಲಭ್ಯವನ್ನು ಬಳ್ಳಾರಿ ವಿಭಾಗದಿಂದ ಕಲ್ಪಿಸಲಾಗಿದೆ.

ಬಳ್ಳಾರಿಯಿಂದ ಬೆಳಿಗ್ಗೆ 06 ಗಂಟೆಗೆ ಹೊರಟು, ಮಧ್ಯಾಹ್ನ 02 ಗಂಟೆಗೆ ಜೋಗ್ ಫಾಲ್ಸ್ ಗೆ ತಲುಪಲಿದೆ (ವಯಾ ಬಳ್ಳಾರಿ-ಚಳ್ಳಕೆರೆ- ಚಿತ್ರದುರ್ಗ- ಚನ್ನಗಿರಿ- ಶಿವಮೊಗ್ಗ- ಸಾಗರ-ಜೋಗ್ ಫಾಲ್ಸ್). ಜೋಗ್ ಫಾಲ್ಸ್ ನಿಂದ ರಾತ್ರಿ 08 ಗಂಟೆಗೆ ಅಲ್ಲಿಂದ ಹೊರಟು ಮರುದಿನ ಬೆಳಿಗ್ಗೆ 04 ಗಂಟೆಗೆ ಬಳ್ಳಾರಿಗೆ ತಲುಪಲಿದೆ. ಪ್ರಯಾಣ ದರ- ರೂ.570. ಈ ಸಾರಿಗೆಯು ಸೆ.13 ರಿಂದ ಪ್ರತಿ ಶನಿವಾರ ಮತ್ತು ಪ್ರತಿ ರವಿವಾರ ಕಾರ್ಯಾಚರಣೆ ಮಾಡಲಾಗುವುದು.

*ಬಳ್ಳಾರಿ-ಗೋಕಾಕ್ ಫಾಲ್ಸ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳ್ಳಾರಿಯಿಂದ ಬೆಳಿಗ್ಗೆ 06 ಗಂಟೆಗೆ ಹೊರಟು, ಮಧ್ಯಾಹ್ನ 01.15 ಕ್ಕೆ ಗೋಕಾಕ್ ಫಾಲ್ಸ್ ಗೆ ತಲುಪಲಿದೆ (ವಯಾ ಹೊಸಪೇಟೆ-ಕೊಪ್ಪಳ- ಗದಗ- ನವಲಗುಂದ- ನರಗುಂದ- ಹುಲಿಕಟ್ಟಿ- ಮನೊಳ್ಳಿ- ಯರಗಟ್ಟಿ- ಮಮದಾಪುರ). ಗೋಕಾಕ್ ಫಾಲ್ಸ್ ನಿಂದ ರಾತ್ರಿ 08 ಗಂಟೆಗೆ ಅಲ್ಲಿಂದ ಹೊರಟು ಮರುದಿನ ಬೆಳಿಗ್ಗೆ 04 ಗಂಟೆಗೆ ಬಳ್ಳಾರಿಗೆ ತಲುಪಲಿದೆ. ಪ್ರಯಾಣ ದರ- ರೂ.515.

ಈ ಸಾರಿಗೆಗೆ www.ksrtc.in ಗೆ ಲಾಗ್-ಇನ್ ಆಗುವ ಮೂಲಕ ಆನ್ ಲೈನ್ ಮುಖಾಂತರ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.7760992163, 7760992164 ಮತ್ತು 7760992167 ಗೆ ಸಂಪರ್ಕಿಸಬಹುದು. ಈ ವಿಶೇಷ ಸಾರಿಗೆ ಸೌಲಭ್ಯವನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular