ಮೈಸೂರು : ಕೆಲಸ ಮಾಡುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಮೈಸೂರಿನ ಡಿಆರ್ ಸಿ ಮಾಲ್ ನಲ್ಲಿ ನಡೆದಿದೆ.
ಮೃತರನ್ನು ಸುನೀಲ್ (27) ಎಂದು ಗುರುತಿಸಲಾಗಿದೆ. ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ಸುನೀಲ್ ಕಟ್ಟಡದಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಚಂದ್ರು ಎಂಬುವವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಆರ್ ಸಿ ಮಾಲ್ ನ 4 ನೇ ಮಹಡಿಯಲ್ಲಿದ್ದ ಬೋರ್ಡ್ ವೊಂದನ್ನು ಸುನಿಲ್ ತೆರವು ಮಾಡುವ ಕೆಲಸ ಮಾಡುತ್ತಿದ್ದರು. ಈ ವೇಳೆ ಸುನೀಲ್ ಆಕಸ್ಮಾತ್ ಆಗಿ ಪಿಒಪಿ ಮೇಲೆ ಕಾಲಿಟ್ಟಿದ್ದಾರೆ. ನಂತರ ಕೆಳಗೆ ಕುಸಿದು ಬಿದ್ದಿದ್ದಾರೆ. ರಾಡ್ ಹಿಡಿದು ನೇತಾಡುತ್ತಿದ್ದ ಸುನೀಲ್ ಸಹಾಯಕ್ಕೆ ಬಂದ ಚಂದ್ರು ಕೂಡ ಗಾಯಗೊಂಡಿದ್ದಾರೆ. ರಾಡ್ ಹಿಡಿದುಕೊಂಡಿದ್ದ ಸುನೀಲ್ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
You Might Also Like
TAGGED:ಮಾಲ್