ಬಾಗಲಕೋಟೆ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ತಂದೆ-ತಾಯಿಯೇ ಹೆತ್ತ ಮಗನಿಗೆ ಡೀಸೆಲ್ ಹಾಕಿ ಬೆಂಕಿ ಹಚ್ಚಿ ಸುಟ್ಟ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಬಿದರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಅನಿಲ್ ಕಾನಟ್ಟಿ (32) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಆತನ ಸಹೋದರ ಬಸವರಾಜ (35) ತಂದೆ ಪರಪ್ಪ (62) ತಾಯಿ ಶಾಂತಾ (55) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ಯದ ಚಟ, ಇನ್ನಿತರ ದುಶ್ಚಟಗಳಿಗೆ ದಾಸನಾಗಿದ್ದ ಮಗ ಹಣ, ಆಸ್ತಿಗಾಗಿ ತಂದೆ-ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ಸಹಿಸದ ತಂದೆ-ತಾಯಿ ಹಾಗೂ ಸಹೋದರ ಸೇರಿಕೊಂಡು ಆತನ ಕೈ ಕಾಲು ಕಟ್ಟಿ , ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ನಡೆಸಿ ಡೀಸೆಲ್ ಸುರಿದು ಹತ್ಯೆ ಮಾಡಿದ್ದಾರೆ.