ಬೆಂಗಳೂರು: ರೌಡಿಶೀಟರ್ ಬಿಕ್ಲುಶಿವ ಕೊಲೆ ಪಕರಣದ ಪ್ರಮುಖ ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ವಿರುದ್ಧ ಮತ್ತೆ ರೌಡಿಶೀಟರ್ ಓಪನ್ ಮಾಡಲಾಗಿದೆ.
ಬೆಂಗಳೂರಿನ ಭಾರತಿನಗರ ಠಾಣೆ ಪೊಲೀಸರು ಆರೋಪಿ ಜಗದೀಶ್ ವಿರುದ್ಧ ಮತ್ತೆ ರೌಡಿಶೀಟರ್ ತೆರೆದಿದ್ದಾರೆ. ಅಪರಾಧ ಪ್ರಕರಣಗಳ ಹಿನ್ನೆಲೆ ಹೊಂದಿರುವ ಜಗದೀಶ್ ವಿರುದ್ಧ ಈ ಹಿಂದೆ ಶಾಸಕರ ಪ್ರಭಾದ ಮೇರೆಗೆ ರೌಡಿಶೀಟರ್ ಕ್ಲೋಸ್ ಮಾಡಲಾಗಿತ್ತು.
ಬಿಜೆಪಿ ಶಾಸಕ ಬೈರತಿ ಬಸವರಾಜ್ ಪ್ರಭಾವ ಬಳಸಿ ಜಗದೀಶ್ ನನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. 2023 ಸೆಪ್ಟೆಂಬರ್ ನಲ್ಲಿ ಜಗದೀಶ್ ನನ್ನು ರೌಡಿಶೀಟರ್ ನಿಂದ ಕೈಬಿಡಲಾಗಿತ್ತು. ಇದೀಗ ಮತ್ತೆ ಆತನ ವಿರುದ್ಧ ರೌಡಿಶೀಟರ್ ಓಪನ್ ಮಾಡಲಾಗಿದೆ. ಬಿಕ್ಲುಶಿವ ಕೊಲೆ ಕೋಸ್ ನ ಒಟ್ಟು 16 ಆರೋಪಿಗಳ ವಿರುದ್ಧ ರೌಡಿಶೀಟರ್ ಓಪನ್ ಆಗಿದೆ ಎಂದು ತಿಳಿದುಬಂದಿದೆ.