ಬೆಂಗಳೂರು: ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ, ರೈತ ಮುಖಂಡರು ಎಲ್ಲರ ಮೇಲಿರುವ ಕೇಸ್ ರದ್ದುಗೊಳಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ಬಿಜೆಪಿ ಹಾಗೂ ಕಾಂಗ್ರೆಸಿಗರ ಮೇಲಿದ್ದ ಅನೇಕ ಕೇಸ್ ರದ್ದುಗೊಳಿಸಿದ್ದೇವೆ. ಬಿಜೆಪಿ ಸರ್ಕಾರ ನಮ್ಮ ಬೆಂಬಲಿಗರ ಮೇಲೆ ಬಲವಂತವಾಗಿ ಹಾಕಿದ್ದ ಪ್ರಕರಣಗಳನ್ನು ರದ್ದುಗೊಳಿಸಿದ್ದೇವೆ. ಕೋವಿಡ್ ಸಮಯದಲ್ಲಿ ನನ್ನ ಹಾಗೂ ಸಿಎಂ ವಿರುದ್ಧ ಕೇಸ್ ಹಾಕಿದ್ದರು. ರಾಜ್ಯ, ರೈತರು, ಭಾಷೆಗಾಗಿ ಮಾಡಿರುವ ಪ್ರತಿಭಟನೆ ಮಾಡಿದವರ ಮೇಲೆ ಹಾಕಿರುವ ಕೇಸ್ ಹಿಂಪಡೆದಿದ್ದೇವೆ ಎಂದರು.
ನಾನು ಬಂಧನವಾಗಿದ್ದ ಇಡಿ ಪ್ರಕರಣ ವಜಾಗೊಂಡಿದೆ. ನನಗೆ ಆಗಿರುವ ಅನ್ಯಾಯ ಸರಿ ಮಾಡುವವರು ಯಾರು? ನಾನು ಜೈಲಿಂದ ಬಿಡುಗಡೆಯಾದ ಬಳಿಕ ಭವ್ಯ ಸ್ವಾಗತಿ ಸಿಕ್ಕಿತು ಎಂದು ಬಹಳ ದೊಡ್ಡ ಚಿಂತಕರು, ಭಾಷಣಕಾರರು ಮಾತನಾಡಿದ್ದರಲ್ಲ, ನನ್ನ ಪ್ರಕರಣ ವಜಾಗೊಳಿಸಿದ ನಂತರ ಏಕೆ ಅಭಿನಂದಿಸಲಿಲ್ಲ? ಈ ವಿಚಾರವಾಗಿ ಹೆಚ್ಚಿನ ಚರ್ಚೆ ಬೇಡ. ನಾವು ರೈತ ಸಂಘ, ಬಿಜೆಪಿ, ಚಳುವಳಿಗಾರರ ಮನವಿಯನ್ನು ಸ್ವೀಕರಿಸಿ ಎಲ್ಲಾ ಪಕ್ಷದವರ ಮೇಲಿದ್ದ ಕೇಸ್ ರದ್ದುಗೊಳಿಸಿದ್ದೇವೆ ಎಂದರು.