ಇತ್ತೀಚೆಗೆ ಅಕ್ರಮ ಸಂಬಂಧಿತ ಘಟನೆಗಳು ಹೆಚ್ಚುತ್ತಿದೆ. ಮದುವೆಯಾದ ಮಹಿಳೆಯರು ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗುತ್ತಿರುವುದು. ಮದುವೆಯಾದ ಪುರುಷರು ಪರ ಸ್ತ್ರೀಯರ ಸಂಗ ಮಾಡುತ್ತಿರುವುದು ಹೆಚ್ಚೆಚ್ಚು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.. ಇದೆನ್ನೆಲ್ಲಾ ನೋಡುತ್ತಿದ್ರೆ ಎತ್ತ ಸಾಗುತ್ತಿದೆ ಸಮಾಜ ಎಂಬ ಪ್ರಶ್ನೆ ಮೂಡುವುದು ಸಹಜ. !
ಇಲ್ಲೋರ್ವ ಮಹಿಳೆ ಗಂಡ ಹಾಗೂ ಮೂವರು ಮಕ್ಕಳನ್ನು ಬಿಟ್ಟು ಲವರ್ ಜೊತೆ ಓಡಿ ಹೋಗಿದ್ದು, ಗಂಡ ಹಾಗೂ ಮಕ್ಕಳು ಕಣ್ಣೀರಿಡುತ್ತಿದ್ದಾರೆ. ಇತ್ತ ಅಮ್ಮ ಬೇಕು ಮಕ್ಕಳು ಹಠ ಹಿಡಿದು ಅಳುತ್ತಿದ್ದರೆ, ಇನ್ನೊಂದು ಕಡೆ ಹೆಂಡತಿ ಬೇಕು ಅಂತ ಗಂಡ ಗೋಗರೆಯುತ್ತಿದ್ದಾರೆ.
ಬೆಂಗಳೂರು ಹೊರವಲಯದ ಅನೇಕಲ್ ಬಸವನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ ಎಂಬುವವರ ಪತ್ನಿ ಲೀಲಾವತಿ ಪ್ರಿಯರಕನ ಜೊತೆ ಓಡಿ ಹೋಗಿದ್ದಾರೆ. ಮಂಜುನಾಥ್ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ. ಆದರೆ ಲೀಲಾವತಿ ಮಾತ್ರ ಪರ ಪುರುಷರ ಜೊತೆ ಎಸ್ಕೇಪ್ ಆಗಿದ್ದಾರೆ.
ಗಂಡನನ್ನು ಬಿಟ್ಟು ಸಂತು ಎಂಬಾತನ ಜೊತೆ ಲವ್ವಿ ಡವ್ವಿ ಶುರು ಮಾಡಿದ ಲೀಲಾವತಿ ಇದೀಗ ಎಸ್ಕೇಪ್ ಆಗಿದ್ದಾಳೆ. ಈ ಸಂಬಂಧ ಪತಿ ಮಂಜುನಾಥ್ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ಲೀಲಾವತಿ ಪ್ರಿಯಕರನ ಜೊತೆ ಬಂದು ನನಗೆ ನನ್ನ ಗಂಡ , ಮಕ್ಕಳು ಬೇಡ. ಪ್ರಿಯಕರ ಬೇಕು ಎಂದಿದ್ದಾಳೆ. ಇತ್ತ ಅಮ್ಮ ಬೇಕು ಮಕ್ಕಳು ಹಠ ಹಿಡಿದು ಅಳುತ್ತಿದ್ದರೆ, ಇನ್ನೊಂದು ಕಡೆ ಹೆಂಡತಿ ಬೇಕು ಅಂತ ಗಂಡ ಗೋಗರೆಯುತ್ತಿದ್ದಾರೆ.