ಬೆಂಗಳೂರು : ಪುಷ್ಪ ಸಿನಿಮಾ ಶೈಲಿಯಲ್ಲಿ ರಕ್ತಚಂದನ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ನೆಲಮಲ್ಲ ಅರಣ್ಯದಿಂದ ಅಕ್ರಮವಾಗಿ ರಕ್ತಚಂದನ ಕದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲಕ ಕಟ್ಟಿಗೆಹಳ್ಳಿಗೆ ತರಲಾಗಿತ್ತು. ನಂತರ ರಕ್ತಚಂದನವನ್ನು ತುಂಡು ತುಂಡಾಗಿಸಿ ಹರಿಯಾಣಕ್ಕೆ ಕಳುಹಿಸಿಕೊಡಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 25 ಲಕ್ಷ ಮೌಲ್ಯದ 1 ಕೆಜಿ ತೂಕದ ರಕ್ತಚಂದನ ವಶಪಡಿಸಿಕೊಳ್ಳಲಾಗಿದೆ ಹಾಗೂ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಏಜಾಜ್ ಷರೀಫ್, ಫಯಾಕ್ ಷರೀಫ್ ಹಾಗೂ ಸಾದಿಕ್ ಖಾನ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಹೊಸಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.