HomeLatest Newsಕಾರ್ಮಿಕರಿಗೆ ಗುಡ್ ನ್ಯೂಸ್: ಅನ್ನಪೂರ್ಣ ಯೋಜನೆಯಡಿ ಉಪಹಾರಕ್ಕಾಗಿ ಮಾಸಿಕ 1500 ರೂ. ನೇರ ವರ್ಗಾವಣೆ

ಕಾರ್ಮಿಕರಿಗೆ ಗುಡ್ ನ್ಯೂಸ್: ಅನ್ನಪೂರ್ಣ ಯೋಜನೆಯಡಿ ಉಪಹಾರಕ್ಕಾಗಿ ಮಾಸಿಕ 1500 ರೂ. ನೇರ ವರ್ಗಾವಣೆ

ಬೆಂಗಳೂರು: ಬೆಂಗಳೂರು ಜಲಮಂಡಳಿ ನೈರ್ಮಲ್ಯೀಕರಣ ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆಯಡಿ ಸ್ಮಾರ್ಟ್‌ಕಾರ್ಡ್‌ ವಿತರಣೆ ಮಾಡಲಾಗಿದೆ.

ಈ ಮೂಲಕ 700+ ನೈರ್ಮಲ್ಯೀಕರಣ ಕಾರ್ಮಿಕರಿಗೆ ಉಪಹಾರಕ್ಕಾಗಿ ಪ್ರತಿದಿನ ₹50 ರಂತೆ ಮಾಸಿಕ ₹1,500ನಷ್ಟು ಹಣವು ಸ್ಮಾರ್ಟ್‌ಕಾರ್ಡ್‌ ಮೂಲಕ ನೇರ ವರ್ಗಾವಣೆಯಾಗಲಿದೆ.

ಕಾರ್ಮಿಕರ ಕ್ಷೇಮಕ್ಕೆ ಪ್ರಥಮ ಆದ್ಯತೆ ನೀಡಿ ಜಲಮಂಡಳಿ ಸ್ವಚ್ಛತಾ ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆ ಜಾರಿಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ಜಲಮಂಡಳಿ ನೈರ್ಮಲೀಕರಣ ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆಯಡಿ ಎಕ್ಸಿಸ್ ಬ್ಯಾಂಕ್‌ನ ಸಹಯೋಗದೊಂದಿಗೆ ಸ್ಮಾರ್ಟ್ ಕಾರ್ಡ್‌ಗಳ ವಿತರಿಸಲಾಗುವುದು. ಈ ಯೋಜನೆಗೆ ಅಂದಾಜು ಮಾಸಿಕ ₹10.50 ಲಕ್ಷ ಮತ್ತು ವಾರ್ಷಿಕ ₹1.26 ಕೋಟಿ ವೆಚ್ಚವಾಗಲಿದ್ದು, ಇದು ದೇಶದಲ್ಲಿಯೇ ಇಂತಹ ತಂತ್ರಜ್ಞಾನ ಆಧಾರಿತ ನೇರ ಹಣ ವರ್ಗಾವಣೆ ಮಾಡುವ ಮೊದಲ ಯೋಜನೆಯಾಗಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular