ಬೆಂಗಳೂರು: ಪ್ರಯಾಣಿಕರ ಸಮೇತ ಕೆ.ಎಸ್.ಆರ್.ಟಿ.ಸಿ ಬಸ್ ನ್ನು ಸಂಚಾರಿ ಪೊಲೀಸರು ಸೀಜ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೊಸಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನ್ನು ಹೆಬ್ಬಾಳ ಬಳಿ ಸೀಜ್ ಮಾಡಲಾಗಿದೆ. ಹೆಬ್ಬಾಳ ಎಸ್ಟೀಮ್ ಮಾಲ್ ಬಳಿ ಚಾಲಕ ಬಸ್ ನಿಲ್ಲಿಸಿದ್ದರು. ಸಂಜಯನಗರ ಸಂಚಾರಿ ಠಾಣೆ ಪೊಲೀಸರು ಪ್ರಯಾಣಿಕರ ಸಮೇತ ಬಸ್ ಸೀಜ್ ಮಾಡಿ ಠಾಣೆಗೆ ಕರೆದೊಯ್ದಿದ್ದಾರೆ.
ರಸ್ತೆಯಲ್ಲಿ ಸ್ಟಾಪ್ ಮಾಡಿದ್ದಕ್ಕೆ ಬಸ್ ಸೀಜ್ ಮಾಡಿ ಪ್ರಯಾಣಿಕರ ಸಮೇತ್ ಬಸ್ ನ್ನು ಷೇಷನ್ ಗೆ ಕರೆತರಲಾಗಿದೆ. ಪ್ರಯಾಣಿಕರು ತಮಗೆ ತುರ್ತು ಸ್ಥಿತಿಯಿದೆ. ಬೇಗನೇ ತೆರಳಬೇಕು ಎಂದು ಕೇಳಿದರೂ ಪೊಲೀಸರು ಬಿಟ್ಟಿಲ್ಲ. ಪ್ರಯಾಣಿಕರ ಸಮೇತ್ ಬಸ್ ನ್ನು ಠಾಣೆಗೆ ತಂದು ನಿಲ್ಲಿಸಿದ್ದಾರೆ.