ಹೈದರಾಬಾದ್: ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಪುತ್ರಿ ಕೆ.ಕವಿತಾ ಅವರನ್ನು ಸ್ವಪಕ್ಷದಿಂದಲೇ ಅಮಾನತುಗೊಳಿಸಿರುವ ಘಟನೆ ನಡೆದಿದೆ.
ಬಿಆರ್ ಎಸ್ ಪಕ್ಷದಿಂದ ಎಂಎಲ್ ಸಿ ಕೆ.ಕವಿತಾ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಸ್ವಪಕ್ಷದ ನಾಯಕರ ವಿರುದ್ಧವೇ ಕವಿತಾ ಭ್ರಷ್ಟಚಹರಾ ಆರೋಪ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಅವರನ್ನು ಪಕ್ಷದಿಂದಲೇ ಅಮಾನತು ಮಾಡಲಾಗಿದೆ.
ಬಿಆರ್ ಎಸ್ ಪಕ್ಷದ ಮುಖಂಡ, ಸಂಬಂಧಿ ಟಿ.ಹರೀಶ್ ರಾವ್ ವಿರುದ್ಧ ಕವಿ ಭ್ರಷ್ಟಾಚಾರ ಆರೋಪ ಮಾಡಿ ಬಹಿರಂಗ ಹೇಳಿಕೆ ನೀಡಿದ್ದರು. ಕಾಳೇಶ್ವರ ನಿರಾವರಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಮಾಜಿ ಸಚಿವ ಹರೀಶ್ ರಾವ್ ವಿರುದ್ಧ ಆರೋಪಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಪಕ್ಷದಿಂದ ಕವಿತಾ ಉಚ್ಛಾಟನೆಗೆ ಒತ್ತಾಯ ಕೇಳಿಬಂದಿತ್ತು. ಇದೀಗ ಕವಿತಾವರನ್ನು ಬಿಆರ್ ಎಸ್ ಪಕ್ಷದಿಂದ ಸಸ್ಪೆಂಡ್ ಮಾಡಲಾಗಿದೆ.