ಬೆಂಗಳೂರು : 2025-26ನೇ ಸಾಲಿನ ಪಂಚಾಯತ್ PDO’ ಗಳ ಗಳ ವರ್ಗಾವಣೆ PDOಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನಿಗಧಿತ ದಿನಾಂಕಗಳಂದು ವರ್ಗಾವಣೆ ಕೌನ್ಸಿಲಿಂಗ್ಗೆ ಹಾಜರಾಗುವಾಗ ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದೆ.
ಉಲ್ಲೇಖಿತ ಅಧಿಸೂಚನೆ ಮತ್ತು ತಿದ್ದುಪಡಿ ಆದೇಶಗಳಲ್ಲಿನ ವೇಳಾಪಟ್ಟಿಯಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಕಾಳಿದಾಸ ಮಾರ್ಗ, ಗಾಂಧಿನಗರ, ಬೆಂಗಳೂರು-560009 ಇಲ್ಲಿ ನಡೆಸಲಾಗುತ್ತಿದ್ದು ವಿಶೇಷ ಪ್ರಕರಣ, ಕಡ್ಡಾಯ ವರ್ಗಾವಣೆ ಮತ್ತು ಸಾಮಾನ್ಯ ಕೋರಿಕೆ ವರ್ಗಾವಣೆಗೆ ಅರ್ಹರಾಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನಿಗಧಿತ ದಿನಾಂಕಗಳಂದು ವರ್ಗಾವಣೆ ಕೌನ್ಸಿಲಿಂಗ್ಗೆ ಹಾಜರಾಗುವಾಗ ಈ ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದೆ.
- ವರ್ಗಾವಣೆ ಕೌನ್ಸಿಲಿಂಗ್ಗೆ ಹಾಜರಾಗುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ಗುರುತಿನ ಚೀಟಿ (ID Card)/ ಆಧಾರ್ ಕಾರ್ಡ್ ಮತ್ತು ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವುದು.
- ವರ್ಗಾವಣೆ ಕೌನ್ಸಿಲಿಂಗ್ನ ನಿಗಧಿತ ದಿನಾಂಕದಂದು ಪೂರ್ವಾಹ್ನದ ಅಧಿವೇಶನಕ್ಕೆ ಹಾಜರಾಗಬೇಕಾದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪೂರ್ವಾಹ್ನ 9:00 ಗಂಟೆಗೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಕಡ್ಡಾಯವಾಗಿ ಹಾಜರಿದ್ದು, ಪೂರ್ವಾಹ್ನ 9:30 ಗಂಟೆಯೊಳಗೆ ಅಗತ್ಯವಾಗಿ ನೊಂದಣಿಮಾಡಿಸಿಕೊಳ್ಳತಕ್ಕದ್ದು. ಅಪರಾಹ್ನದ ಅಧಿವೇಶನಕ್ಕೆ ಹಾಜರಾಗಬೇಕಾದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಪರಾಹ್ನ 01:00 ಗಂಟೆಗೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಕಡ್ಡಾಯವಾಗಿ ಹಾಜರಿದ್ದು ಅಪರಾಹ್ನ 1:30 ಗಂಟೆಯೊಳಗೆ ನೊಂದಣಿ ಮಾಡಿಸಿಕೊಳ್ಳತಕ್ಕದ್ದು.
- ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆಗೆ ಹಾಜರಾದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ಣವಾಗುವವರೆಗೂ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಕಚೇರಿಯಲ್ಲಿ ಹಾಜರಿದ್ದು, ವರ್ಗಾವಣೆ ಆದೇಶಗಳನ್ನು ಹಾಗೂ ಹಾಜರಾತಿ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಪಡೆದುಕೊಂಡು ತೆರಳತಕ್ಕದ್ದು.







You Might Also Like
TAGGED:PDO