ಬೆಂಗಳೂರು : ಇಂದು ನಟ ಕಿಚ್ಚ ಸುದೀಪ್ ಗೆ ಹುಟ್ಟು ಹಬ್ಬದ ಸಂಭ್ರಮ. ಹುಟ್ಟುಹಬ್ಬದ ಪ್ರಯುಕ್ತ ಸುದೀಪ್ ನಟನೆಯ 47 ನೇ ಚಿತ್ರ ‘ಮಾರ್ಕ್’ ಟೀಸರ್ ರಿಲೀಸ್ ಆಗಿದೆ.
ಮ್ಯಾಕ್ಸ್ ಸಿನಿಮಾದ ಬಳಿಕ ಮಾರ್ಕ್ ಸಿನಿಮಾ ರೆಡಿಯಾಗುತ್ತಿದೆ. ಡಿಸೆಂಬರ್ 25 ಕ್ಕೆ ಮಾರ್ಕ್ ಸಿನಿಮಾ ತೆರೆಗೆ ಬರಲಿದೆ. ಸುದೀಪ್ ಹುಟ್ಟುಹಬ್ಬಕ್ಕೆ ಚಿತ್ರ ತಂಡ ಚಿತ್ರದ ಟೀಸರ್ ರಿಲೀಸ್ ಮಾಡಿದೆ.
ಮಾರ್ಕ್ ಸಿನಿಮಾ ತಂಡ ಇಂದು ಮಾರ್ಕ್ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಮಾಡಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಲುಕ್ ಕೂಡ ಅನಾವರಣಗೊಂಡಿದೆ. ಹೊಸ ಲುಕ್ ನಲ್ಲಿ ಸುದೀಪ್ ಮಿಂಚಿದ್ದು, ಸಿನಿಮಾ ಬಹಳ ನಿರೀಕ್ಷೆ ಹುಟ್ಟಿಸಿದೆ. ಟೀಸರ್ ಅಧ್ಬುತವಾಗಿ ಮೂಡಿಬಂದಿದ್ದು, ಸಿನಿಮಾ ಕ್ರೈಮ್ ಥ್ರಿಲ್ಲರ್ ಸಸ್ಪೆನ್ಸ್ ಮೂವಿ ಎಂದು ಹೇಳಲಾಗುತ್ತಿದೆ.