2025-26ನೇ ಸಾಲಿನ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಪೊಲೀಸ್ ಕಾನ್ಸ್ಟೇಬಲ್ ಪೂರ್ವ-ನೇಮಕಾತಿ, ಪೊಲೀಸ್ ಸಬ್ಇನ್ಸ್ಪೆಕ್ಟರ್ ಪರೀಕ್ಷಾ ಪೂರ್ವ ಮತ್ತು ಡ್ರೋನ್ ಉಪಕರಣ ಉಪಯೋಗಿಸುವ ಕುರಿತು ವಸತಿಯುತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
60 ದಿನಗಳ ಪೊಲೀಸ್ ಕಾನ್ಸ್ಟೇಬಲ್ ಪೂರ್ವ-ನೇಮಕಾತಿ ತರಬೇತಿಗೆ ಆಗಸ್ಟ್ 31, 2025 ಮತ್ತು 90 ದಿನಗಳ ಪೊಲೀಸ್ ಸಬ್ಇನ್ಸ್ಪೆಕ್ಟರ್ ಪರೀಕ್ಷಾ ಪೂರ್ವ ತರಬೇತಿಗೆ ಸೆಪ್ಟೆಂಬರ 12, 2025 ಹಾಗೂ 15 ದಿನಗಳ ಡ್ರೋನ್ ಉಪಕರಣ ಉಪಯೋಗಿಸುವ ಕುರಿತ ತರಬೇತಿಗೆ ಸೆಪ್ಟೆಂಬರ 20, 2025 ರೊಳಗಾಗಿ ವೈಬ್ ಸೈಟ್ https://igccd.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2447201 ಗೆ ಸಂಪರ್ಕಿಸಬಹುದು ಎಂದು ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You Might Also Like
TAGGED:ತರಬೇತಿ