HomeLatest Newsಮತ್ತೊಂದು ಅಮಾನವೀಯ ಘಟನೆ: ನೀರಿನ ಮಡಕೆ ಮುಟ್ಟಿದ್ದಕ್ಕೆ ಉಲ್ಟಾ ನೇತು ಹಾಕಿ ದಲಿತ ಬಾಲಕನ ಮೇಲೆ...

ಮತ್ತೊಂದು ಅಮಾನವೀಯ ಘಟನೆ: ನೀರಿನ ಮಡಕೆ ಮುಟ್ಟಿದ್ದಕ್ಕೆ ಉಲ್ಟಾ ನೇತು ಹಾಕಿ ದಲಿತ ಬಾಲಕನ ಮೇಲೆ ಹಲ್ಲೆ

ಜೈಪುರ್: ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕೆ ಎಂಟು ವರ್ಷದ ದಲಿತ ಬಾಲಕನನ್ನು ಮನಬಂದಂತೆ ಥಳಿಸಲಾಗಿದೆ.

ಮರಕ್ಕೆ ಉಲ್ಟಾ ನೇತುಹಾಕಿ ಬಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ರಾಜಸ್ಥಾನದ ಬಾರ್ಮೇರ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನನ್ನು ಬಿಡಿಸಲು ಹೋದ ತಾಯಿ ಮತ್ತು ಅಜ್ಜಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ.

ರಾಜಸ್ಥಾನದ ಬಾರ್ಮೇರ್ ಜಿಲ್ಲೆಯ ಭಾಕ್ರಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಆಟವಾಡಿಕೊಂಡಿದ್ದ ಬಾಲಕನನ್ನು ಕರೆದ ನರ್ನಾರಾಮ್ ಪ್ರಜಾಪತ್ ಮತ್ತು ದೇಮರಾಮ್ ಪ್ರಜಾಪತ್ ಎಂಬುವವರು ಶೌಚಾಲಯ ತೊಳೆದು ಅಲ್ಲಿದ್ದ ಕಸವನ್ನು ತೆಗೆಯಲು ಹೇಳಿದ್ದಾರೆ. ಆಗ ಬಾಲಕ ಶೌಚಾಲಯ ಸ್ವಚ್ಛಗೊಳಿಸಿ ಕಸ ತೆಗೆದು ಹಾಕಿ ಬಂದು ಕುಡಿಯಲು ನೀರು ಕೇಳಿದ್ದಾನೆ. ಅಲ್ಲಿಯೇ ಇದ್ದ ನೀರಿನ ಮಡಕೆಯನ್ನು ಮುಟ್ಟಿದ್ದಾನೆ. ಇದರಿಂದ ಕೋಪಗೊಂಡ ನರ್ನಾರಾಮ್ ಪ್ರಜಾಪತ್ ಸಮೀಪದಲ್ಲಿದ್ದ ತನ್ನ ಮನೆಗೆ ಬಾಲಕನನ್ನು ಎಳೆದೊಯ್ದು ಮರಕ್ಕೆ ಉಲ್ಟಾ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಲಕನ ರಕ್ಷಣೆಗಾಗಿ ಅಲ್ಲಿಗೆ ಬಂದಿದ್ದ ಬಾಲಕನ ಸಂಬಂಧಿಕರು ಮತ್ತು ತಾಯಿ, ಅಜ್ಜಿಯ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಸಂಬಂಧಿಕರಲ್ಲಿ ಒಬ್ಬ ಘಟನೆಯ ವಿಡಿಯೋ ಮಾಡಿಕೊಂಡಾಗ ಹಲ್ಲೆ ಮಾಡುವುದನ್ನು ನಿಲ್ಲಿಸಿದ್ದಾನೆ. ಪೊಲೀಸರಿಗೆ ದೂರು ನೀಡಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular