ಬೆಂಗಳೂರು : ಇತ್ತೀಚೆಗಷ್ಟೇ ಖ್ಯಾತ ನಿರೂಪಕಿ ಅನುಶ್ರೀ ಮದುವೆ ಅದ್ದೂರಿಯಾಗಿ ನೆರವೇರಿದೆ. ಇದೀಗ ಹಾಸ್ಯನಟ ಚಿಕ್ಕಣ್ಣ ಸದ್ದಿಲ್ಲದೇ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿ ಪಾವನಾ ಜೊತೆ ಚಿಕ್ಕಣ್ಣ ಮದುವೆ ನಡೆಯಲಿದೆ. ಈಗಾಗಲೇ ಯುವತಿಗೆ ಹೂ ಮುಡಿಸಿ ಮದುವೆ ಫಿಕ್ಸ್ ಮಾಡಲಾಗಿದೆ. ಸದ್ಯದಲ್ಲೇ ನಿಶ್ಚಿತಾರ್ಥ ನಡೆಯಲಿದೆ. ಪಾವನಾ ಉದ್ಯಮಿಯಾಗಿದ್ದು, ಜೊತೆಗೆ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ.
ಚಿಕ್ಕಣ್ಣ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಸುದ್ದಿಗಳು ಹರಿದಾಡಿದ್ದವು. ಅಂತೂ ಇಂತೂ ಎಲ್ಲಾ ಅಂತೆಕಂತೆಗಳಿಗೆ ತೆರೆ ಬಿದ್ದಿದೆ.
ಮೈಸೂರಿನ ಬಲ್ಲಹಳ್ಳಿಯಲ್ಲಿ ಹುಟ್ಟಿ ಬೆಳೆದ ಚಿಕ್ಕಣ್ಣ ಮೊದಲು ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಂತರ ಕಿರುತೆರೆ ಕಾಮಿಡಿ ಶೋಗಳಲ್ಲಿ ನಟಿಸಿ ನಂತರ ಹಂತ ಹಂತವಾಗಿ ಬೆಳೆದರು. ಕಿರಾತಕ ಚಿತ್ರದಲ್ಲಿ ಚಿಕ್ಕಣ್ಣನ ಕಾಮಿಡಿ ಕಿಕ್ ಸಿನಿರಸಿಕರಿಗೆ ಬಹಳ ಇಷ್ಟ ಆಗಿತ್ತು. ನಂತರ ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಜೊತೆ ಪ್ರಮುಖ ನಾಯಕ ನಟನಾಗಿ ಚಿಕ್ಕಣ್ಣ ನಟಿಸಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಇದೀಗ ಹಾಸ್ಯನಟ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.