ವಾಹನ ಸವಾರರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಇಂದಿನಿಂದ ನೆಲಮಂಗಲ-ಹಾಸನ ಟೋಲ್ ದರ ಹೆಚ್ಚಳವಾಗಲಿದೆ. ಇಂದು ಮಧ್ಯರಾತ್ರಿಯಿಂದ ಪರಿಷ್ಕ್ರ ತ ದರ ಜಾರಿಗೆ ಬರಲಿದೆ.
ಸೋಮವಾರ ಮಧ್ಯರಾತ್ರಿಯಿಂದ 5 ರೂ ದರ ಏರಿಕೆಯಾಗಲಿದೆ. ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ-75 ರ ಟೋಲ್ ಮೂಲಕ ಸಂಚರಿಸುವ ವಾಹನ ಸವಾರರಿಗೆ ಬರೆ ಬಿದ್ದಿದೆ. ದೊಡ್ಡಕರೇನಹಳ್ಳಿ ಟೀಲ್ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿಯೂ ದರ ಏರಿಕೆಯಾಗಿದೆ.
ಏಕಮುಖ ಸಂಚಾರಕ್ಕೆ 5 ರು., ದ್ವಿಮುಖ ಸಂಚಾರಕ್ಕೆ 10 ರು. ದರ ಏರಿಕೆ ಮಾಡಲಾಗಿದೆ. ಕಾರು, ಜೀಪು, ವ್ಯಾನ್ ಹಾಗೂ ಲಘು ಮೋಟಾರ್ ವಾಹನಗಳಿಗೆ ಮೊದಲಿದ್ದ ದರವೇ ಇರಲಿದೆ. ಫಾಸ್ಟ್ ಟ್ಯಾಗ್ ಇದ್ದರೆ ಏಕಮುಖ ಸಂಚಾರಕ್ಕೆ ಈಗಿನ ದರ 55 ರು., 60 ದಿನದ ಸಂಚಾರಕ್ಕೆ 85 ರು., ಫಾಸ್ಟ್ ಟ್ಯಾಗ್ ರಹಿತ 110 ರು. ಇತ್ತು. ಈಗಿನ ದರ 120 ರು. ಆಗಿದ್ದು ದರ ಏರಿಕೆ ಮಾಡಲಾಗಿದೆ. ಹಣದುಬ್ಬರ ಮತ್ತು ರಸ್ತೆ ನಿರ್ವಹಣೆಯ ವೆಚ್ಚದ ಏರಿಕೆಗೆ ಅನುಗುಣವಾಗಿ ಟೋಲ್ ದರ ಹೆಚ್ಚಳ ಮಾಡಲಾಗಿದೆ.
You Might Also Like
TAGGED:ನೆಲಮಂಗಲ-ಹಾಸನ