ಬೆಂಗಳೂರು: ಶಾಸಕರ ಶಿಫಾರಸು ಆಧರಿಸಿದ ವರ್ಗಾವಣೆ ಅಮಾನ್ಯವಲ್ಲ ಎಂದು ಹೈಕೋರ್ಟ್ ಹೇಳಿದೆ. ತಹಶೀಲ್ದಾರ್ ಎಸ್. ವೆಂಕಟೇಶಪ್ಪ ವರ್ಗಾವಣೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಬಂಗಾರಪೇಟೆ ಶಾಸಕರ ಶಿಫಾರಸಿನಂತೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ರದ್ದುಪಡಿಸಲು ಕೆಎಟಿ ಕೂಡ ನಿರಾಕರಿಸಿತ್ತು. ಹೀಗಾಗಿ ವೆಂಕಟೇಶಪ್ಪ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನಿಯಮದಂತೆ ವರ್ಗಾವಣೆಗೆ ಮುಖ್ಯಮಂತ್ರಿಗಳ ಅನುಮತಿ ಪಡೆಯಲಾಗಿದೆ. ಸ್ಥಳೀಯ ನಿವಾಸಿಗಳು ದೂರಿದ್ದರಿಂದ ವರ್ಗಾವಣೆ ಮಾಡಲಾಗಿದೆ ಎಂಬ ಸರ್ಕಾರದ ವಾದವನ್ನು ಒಪ್ಪಿದ ಹೈಕೋರ್ಟ್ ವರ್ಗಾವಣೆಯನ್ನು ಎತ್ತಿ ಹಿಡಿದಿದೆ.
ವಿಶೇಷ ಸಂದರ್ಭಗಳಲ್ಲಿ ಸಿಎಂ ಸಮ್ಮತಿಯೊಂದಿಗೆ ವರ್ಗಾವಣೆಗೆ ಅವಕಾಶವಿದೆ ಎಂದು ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.