ಪಾಟ್ನಾ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವೋಟರ್ ಅಧಿಕಾರ ಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ರಾಜ್ಯದ ಹಲವು ನಾಯಕರು ಭಾಗಿಯಾಗಿದ್ದರು.
ಬಿಹಾರದ ಗೋಪಾಲ್ ಗಂಜ್ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಸಿಎಂ ಸಿದ್ಧರಾಮಯ್ಯ ಭಾಗವಹಿಸಿದ್ದರು. ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಅವರೊಂದಿಗೆ ತೆರೆದ ವಾಹನದಲ್ಲಿ ಸಿದ್ಧರಾಮಯ್ಯ ಮೆರವಣಿಗೆಯಲ್ಲಿ ಸಾಗಿದರು.
ಇದೇ ವೇಳೆ ಬಿಹಾರದ ಪಾಟ್ನಾದಲ್ಲಿರುವ ಕಾಂಗ್ರೆಸ್ ಕಚೇರಿಯ ಮೇಲೆ ದಾಳಿ ನಡೆದಿದೆ.. ಇದು ಸ್ವಾತಂತ್ರ್ಯ ಚಳುವಳಿ ನಡೆದ ಐತಿಹಾಸಿಕ ಕಟ್ಟಡವಾಗಿದೆ.
ರಾಹುಲ್ ಗಾಂಧಿ ಅವರ ಹೆಚ್ಚುತ್ತಿರುವ ಜನಪ್ರಿಯತೆಗೆ ಹೆದರಿ, ಮುಂಬರುವ ಚುನಾವಣೆಯಲ್ಲಿ ತಾವು ಸೋಲುತ್ತೇವೆಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ಕಾಂಗ್ರೆಸ್ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ. ಬಿಜೆಪಿ ಜನರ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವೋಟರ್ ಅಧಿಕಾರ ಯಾತ್ರೆಯಲ್ಲಿ ಭಾಗವಹಿಸಿ ಬಿಹಾರದ ಗೋಪಾಲ್ ಗಂಜ್ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡೆ.
— Siddaramaiah (@siddaramaiah) August 29, 2025
Participated in the 'Voter Adhikar Yatra' led by Shri @RahulGandhi , Leader of the Opposition in the Lok Sabha,… pic.twitter.com/bfg4IUqLQr
Disturbed by Shri @RahulGandhi’s yatra, BJP goons attacked the historic Congress office in Patna – a symbol of our freedom struggle.
— Siddaramaiah (@siddaramaiah) August 29, 2025
Afraid of his growing popularity and certain defeat, they resort to violence.
I strongly condemn this attack. https://t.co/L6h74eGHG9