ಬೆಂಗಳೂರು: ಅಭಿಮಾನ್ ಸ್ಟುಡಿಯೋ ಜಾಗ ಅರಣ್ಯ ಪ್ರದೇಶದ್ದು ಎಂದು ಘೋಷಣೆ ಮಾಡಲಾಗಿದೆ. ಘೋಷಣೆ ಪತ್ರವನ್ನು ಬೆಂಗಳೂರು ಜಿಲ್ಲಾಧಿಕಾರಿಗೆ ಐಎಫ್ಎಸ್ ಅಧಿಕಾರಿ ರವಾನಿಸಿದ್ದಾರೆ.
ಹಿರಿಯ ನಟ ದಿ. ಬಾಲಕೃಷ್ಣ ಅವರಿಗೆ ನೀಡಿದ 20 ಎಕರೆ ಜಾಗವನ್ನು ಪರಭಾರೆ ಮಾಡುವಂತಿಲ್ಲ. 20 ವರ್ಷಗಳ ಅವಧಿಗೆ ಯಾವುದೇ ಪರಭಾರೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಆದರೆ ಬಾಲಕೃಷ್ಣ ಕುಟುಂಬ 12 ಎಕರೆ ಭೂಮಿಯನ್ನು ಮಾರಾಟ ಮಾಡಿದೆ.
ಅಭಿಮಾನ್ ಸ್ಟುಡಿಯೋ ನಿರ್ಮಾಣಕ್ಕೆ 12 ಎಕರೆ ಭೂಮಿ ಮಾರಾಟ ಮಾಡಲಾಗಿದೆ. ಸರ್ಕಾರದ ಅಧಿನಿಯಮ ಉಲ್ಲಂಘನೆ ಮಾಡಿ ಮಾರಾಟ ಮಾಡಿದ್ದಾರೆ. ಇದುವರೆಗೆ ಅಭಿಮಾನ್ ಸ್ಟುಡಿಯೋ ನಿರ್ಮಾಣ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಸದ್ಯ ಸದರಿ ಜಮೀನು ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಬಾಲಕೃಷ್ಣ ಕುಟುಂಬದಿಂದ ಭೂಮಿ ವಾಪಸ್ ಪಡೆಯಲು ಚಿಂತನೆ ನಡೆದಿದೆ ಎನ್ನಲಾಗಿದೆ.