ಮಂಗಳೂರು: 2012ರಲ್ಲಿ ನಡೆದಿದ್ದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮೃತದೇಹವನ್ನು ಕೊಂಡೊಯ್ಯುತ್ತಿರುವುದನ್ನು ನೋಡಿದ್ದೆ ಎಂದು ಎಸ್ ಐಟಿ ಮುಂದೆ ಧರ್ಮಸ್ಥಳ ಪ್ರಕರಣದ ದೂರುದಾರ ಚಿನ್ನಯ್ಯ ಹೇಳಿಕೆ ಬೆನ್ನಲ್ಲೇ ಸೌಜನ್ಯ ತಾಯಿ ಇದೀಗ ಎಸ್ ಐಟಿಗೆ ದೂರು ನೀಡಿದ್ದಾರೆ.
ಧರ್ಮಸ್ಥಳದ ಬೆಳ್ತಂಗಡಿ ಠಾಣೆಗೆ ಬಂದಿದ್ದ ಸೌಜನ್ಯ ತಾಯಿ ಕುಸುಮಾವತಿ ಅವರಿಗೆ ಆರಂಭದಲ್ಲಿ ಎಸ್ ಐಟಿ ಭೇಟಿಗೆ ಅನುಮತಿ ಸಿಕ್ಕಿರಲಿಲ್ಲ. ಬಳಿಕ ಎಸ್ ಐಟಿ ತಂಡದ ಭೇಟಿಗೆ ಅವಕಾಶ ನೀಡಲಾಗಿದ್ದು, ಸೌಜನ್ಯ ಹತ್ಯೆ ಪ್ರಕರಣದ ಬಗ್ಗೆಯೂ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.
ತನಿಖೆಯ ವೇಳೆ ನಿಮ್ಮ ದೂರಿನ ಬಗ್ಗೆಯೂ ಪರಿಗಣಿಸುವುದಾಗಿ ಎಸ್ ಐಟಿ ಎಸ್ ಪಿ ಕುಸುಮಾವತಿ ಅವರಿಗೆ ಭರವಸೆ ನೀಡಿದ್ದು, ದೂರು ಸ್ವೀಕರಿಸಿದ್ದಾಗಿ ಹಿಂಬರಹ ಬರೆದು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.