ಶಿವಮೊಗ್ಗ: ಜೋಗ್ ಫಾಲ್ಸ್ ಗೆ ಬಿದ್ದು ಆತ್ಮಹತ್ಯೆಗೆ ಮುಂದಾಗಿದ್ದ ಬಟ್ಟೆ ವ್ಯಾಪಾರಿಯೊಬ್ಬರ ಮನಪರಿವರ್ತಿಸಿ ಸಬ್ ಇನ್ಸ್ ಪೆಕ್ಟರ್ ವಾಪಸ್ ಮನೆಗೆ ಕಲುಹಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಕಾರ್ಗಲ್ ಸಬ್ ಇನ್ಸ್ ಪೆಕ್ಟರ್ ನಾಗರಾಜ್, ಬಟ್ಟೆ ವ್ಯಾಪಾರೊಯೊಬ್ಬರನ್ನು ಆತ್ಮಹತ್ಯೆಯಿಂದ ಪಾರು ಮಾಡಿದ್ದಾರೆ. ಜೋಗ್ ಫಾಲ್ಸ್ ಬಳಿ ಸಬ್ ಇನ್ಸ್ ಪೆಕ್ಟರ್ ರೌಂಡ್ಸ್ ನಲ್ಲಿದ್ದಾಗ, ವ್ಯಕ್ತಿಯೋರ್ವ ಜೋಗ್ ಫಾಲ್ಸ್ ನ ಅಪಾಯದ ಸ್ಥಳಗಳ ಬಗ್ಗೆ ಅಲ್ಲಿನ ಆಟೋ ಚಾಲಕನಿಂದ ಮಾಹಿತಿ ಪಡೆಯುತ್ತಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ರೌಂಡ್ಸ್ ನಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಸ್ಥಳಕ್ಕೆ ತೆರಳಿ ಬಟ್ಟೆ ವ್ಯಾಪಾರಿಯನ್ನು ಕರೆತಂದು ವಿಚಾರಿಸಿದ್ದಾರೆ.
ಆತ ತಾನು ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದು, ವ್ಯಾಪಾರದಲ್ಲಿ ನಷ್ಟ, ಪೋಷಕರ ಆರೋಗ್ಯ ಸಮಸ್ಯೆ ಕಾರಣ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದು, ಆರ್ಥಿಕ ಸಂಕಷ್ಟಕ್ಕೀಡಾಗಿದ್ದೇನೆ. ಜೀವನದಲ್ಲಿ ಜಿಗುಪ್ಸೆಗೊಂಡು ಕಳೆದ 20 ದಿನಗಳ ಹಿಂದೆ ಮನೆ ಬೀಟ್ಟು ಬಂದಿದ್ದಾಗಿ ತಿಳಿಸಿದ್ದಾನೆ. ಅಲ್ಲದೇ ರೈಲು ನಿಲ್ದಾಣ ಸೇರಿದಂತೆ ಹಲವೆಡೆ ವಾಸಿಸುತ್ತಾ ಅಂತಿಮವಾಗಿ ಸಾಯುವ ನಿರ್ಧಾರ ಮಾಡಿ ಜೋಗ್ ಫಾಲ್ಸ್ ಬಳಿ ಹೋಗಿದ್ದೆ ಎಂದು ತಿಳಿಸಿದ್ದಾನೆ. ಆತನಿಗೆ ಧೈರ್ಯ ತುಂಬಿದ ಸಬ್ ಇನ್ಸ್ ಪೆಕ್ಟರ್ ನಾಗರಾಜ್, ಆತನ ಮನವೊಲಿಸಿ ಆತ್ಮಹತ್ಯೆ ನಿರ್ಧಾರ ಬದಲಿಸಿದ್ದಾರೆ. ಪೋಷಕರನ್ನು ಫೋನ್ ಮೂಲಕ ಸಂಪರ್ಕಿಸಿ ಆತನನ್ನು ವಾಪಸ್ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.