ಬೆಂಗಳೂರು: ಧರ್ಮಸ್ಥಳದ ಮೇಲೆ ಕಾಂಗ್ರೆಸ್ ಸರ್ಕಾರ ದಾಳಿ ನಡೆಸಿದೆ. ಈ ಮೂಲಕ ಧರ್ಮಸ್ಥಳ ಸಂಪತ್ತು ಲೂಟಿ ಮಾಡಲು ಸರ್ಕಾರ ಯತ್ನ ನಡೆಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಕುತಂತ್ರದ ಮೂಲಕ ಧರ್ಮಸ್ಥಳವನ್ನು ಅತಂತ್ರ ಮಾಡಿದ್ದಾರೆ. ನಗರ ನಕ್ಸಲರನ್ನು ಬಿಟ್ಟು ಅಲ್ಲಿನ ಸಂಪತ್ತು ಲೂಟಿ ಮಾಡಲು ಯತ್ನಿಸಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಸುತ್ತ ಇರುವವರಿಂದಲೇ ಧರ್ಮಸ್ಥಳವನ್ನು ಅತಂತ್ರ ಮಾಡಲು ಯತ್ನ ನಡೆದಿದೆ. ಎರಡು ವರ್ಷ ಟ್ರೇನಿಂಗ್ ಪಡೆದು ಧರ್ಮಸ್ಥಳ ಮುಗಿಸಲು ರಾಜಕೀಯ ಹುನ್ನಾರ ನಡೆಸಲಾಗಿದೆ. ರಾಜಕೀಯ ಉದ್ದೇಶದಿಂದಲೇ ಎಸ್ ಐಟಿ ರಚನೆ ಮಾಡಿದರು. ಧರ್ಮಸ್ಥಳ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲವೆಂದು ಹೇಳಿದರು.