ಬೆಂಗಳೂರು : ಗಣೇಶನನ್ನು ಕೂರಿಸಿದ ಪುಟಾಣಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿ ಬಾಲ್ಯದ ನೆನಪು ಮೆಲುಕು ಹಾಕಿದ್ದಾರೆ.ಮಕ್ಕಳ ಜೊತೆ ಫೋಟೋ ತೆಗೆಸಿಕೊಂಡು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಸಂತೋಷ ಪಟ್ಟಿದ್ದಾರೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಎಕ್ಸ್ ಖಾತೆಯಲ್ಲಿ ಟ್ವೀಟ್ ಹಂಚಿಕೊಂಡಿದ್ದಾರೆ. ಗಣೇಶ ಬಂದ ಕಾಯಿ ಕಡುಬು ತಂದ… ಚಿಕ್ಕೆರೆಲಿ ಬಿದ್ದ ದೊಡ್ಡ ಕೆರೇಲಿ ಎದ್ದ….. ದೊಡ್ಡ ಆಲಹಳ್ಳಿಯಲ್ಲಿ ಪುಟಾಣಿ ಮಕ್ಕಳು ಪುಟಾಣಿ ಗಣೇಶನ ಕೂರಿಸಿದ್ದಾರೆ ಎಂದು ತಿಳಿದ ತಕ್ಷಣ ಅಲ್ಲಿಗೆ ಹೋಗಿ ಮಕ್ಕಳ ಜೊತೆ ಸಂಭ್ರಮದಲ್ಲಿ ಪಾಲ್ಗೊಂಡೆ. ಅವರ ಜೊತೆ ಫೋಟೋ ತೆಗೆಸಿಕೊಂಡು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಸಂತೋಷ ಪಟ್ಟೆ. ಗಣೇಶ ಹಬ್ಬ ಎಂದರೆ ಸಂತಸ, ಸಂಭ್ರಮ, ಅದೂ ಮಕ್ಕಳ ಹುಮ್ಮಸು ಕಂಡಾಗ ಬಾಲ್ಯದ ದಿನಗಳು ಕಣ್ಣಮುಂದೆ ಹಾದುಬಂತು. ಚಿಕ್ಕ ಕೈಗಳು – ದೊಡ್ಡ ಹೃದಯಗಳು. ಗಣೇಶ ಈ ಪುಟಾಣಿಗಳಿಗೆ ಒಳ್ಳೆದನ್ನು ಮಾಡಲಿ, ನಮ್ಮ ರಾಜ್ಯದ ಎಲ್ಲ ಮಕ್ಕಳ ಎಲ್ಲ ಆಸೆಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಗಣೇಶ ಬಂದ ಕಾಯಿ ಕಡುಬು ತಂದ…
— DK Shivakumar (@DKShivakumar) August 27, 2025
ಚಿಕ್ಕೆರೆಲಿ ಬಿದ್ದ ದೊಡ್ಡ ಕೆರೇಲಿ ಎದ್ದ…..
ದೊಡ್ಡ ಆಲಹಳ್ಳಿಯಲ್ಲಿ ಪುಟಾಣಿ ಮಕ್ಕಳು ಪುಟಾಣಿ ಗಣೇಶನ ಕೂರಿಸಿದ್ದಾರೆ ಎಂದು ತಿಳಿದ ತಕ್ಷಣ ಅಲ್ಲಿಗೆ ಹೋಗಿ ಮಕ್ಕಳ ಜೊತೆ ಸಂಭ್ರಮದಲ್ಲಿ ಪಾಲ್ಗೊಂಡೆ. ಅವರ ಜೊತೆ ಫೋಟೋ ತೆಗೆಸಿಕೊಂಡು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಸಂತೋಷ ಪಟ್ಟೆ.
ಗಣೇಶ ಹಬ್ಬ ಎಂದರೆ… pic.twitter.com/d0dnnPFxtp