ಬೀದರ್ : ರಜೆ ಕೊಡದಿದ್ದಕ್ಕೆ ಬಸ್ ನಲ್ಲೇ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆ ಬಸ್ ಚಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ನಲ್ಲಿ ನಡೆದಿದೆ.
ಮೃತ ಚಾಲಕನನ್ನು ರಾಜು ಅಣದೂರು (55) ಎಂದು ಗುರುತಿಸಲಾಗಿದೆ. ಮಗಳ ಮನೆಗೆ ಹೋಗಬೇಕು ಎಂದು ರಾಜು ಡಿಪೋ ಮ್ಯಾನೇಜರ್ ಬಳಿ ರಜೆ ಕೇಳಿದ್ದಾರೆ. ರಜೆ ಕೊಡಲು ಆಗಲ್ಲ, ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಿ, ರಜೆ ಹಾಕಿದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ.
ಇದರಿಂದ ಮನನೊಂದ ರಾಜು ರಾತ್ರಿ ಡ್ಯೂಟಿ ಮುಗಿಸಿ ಬಸ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರಾಜು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಡಿಪೋ ಅಧಿಕಾರಿಗಳ ವಿರುದ್ಧ ರಾಜು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
You Might Also Like
TAGGED:ಬೀದರ್