ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ್ದಾಗಿ ಹೇಳಿಕೆ ನೀಡಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಒಂದೆಡೆ ಎಸ್ ಐಟಿ ತೀವ್ರ ವಿಚಾರಣೆ ನಡೆಸುತ್ತಿದೆ. ಮತ್ತೊಂದೆಡೆ ಮಾಸ್ಕ್ ಮ್ಯಾನ್ ತಂದಿದ್ದ ತಲೆಬುರುಡೆಯ ರಹಸ್ಯ ಎಫ್ ಎಸ್ ಎಲ್ ವರದಿಯಲ್ಲಿ ಬಯಲಾಗಿದೆ.
ಚಿನ್ನಯ್ಯ ಇದು ಹೆಣ್ಣುಮಗಳ ತಲೆಬುರುಡೆ ಎಂದು ತಲೆಬುರುಡೆಯನ್ನು ತಂದಿದ್ದ. ಇದೇ ರೀತಿ ನೂರಾರು ಶವಗಳನ್ನು ಧರ್ಮ್ಸ್ಥಳದ ವಿವಿಧೆಡೆ ಹೂತುಹಾಕಿದ್ದೇನೆ ಎಂದು ಹೇಳಿದ್ದ. ಆತ ತಂದಿದ್ದ ತಲೆಬುರುಡೆಯನ್ನು ಎಫ್ ಎಸ್ ಎಲ್ ಪರಿಶೀಲಿಸಿದ್ದು, ತನಿಖೆಯ್ತಲ್ಲಿ ಅದು 25-30 ವರ್ಷದೊಳಗಿನ ಪುರುಷನ ತಲೆಬುರುಡೆ ಎಂದು ತಿಳಿದುಬಂದಿದೆ.
ಚಿನ್ನಯ್ಯ ತಂದಿರುವ ಬುರುಡೆಯಲ್ಲಿ ಯಾವುದೇ ಮಣ್ಣಿನ ಕಣ ಪತ್ತೆಯಾಗಿಲ್ಲ. ಎಫ್ ಎಸ್ ಎಲ್ ನ ಪ್ರಾಥಮಿಕ ವರದಿ ಎಸ್ ಐಟಿ ಕೈಸೇರಿದ್ದು, ಚಿನ್ನಯ್ಯ ತಂದ ಬುರುಡೆ ಯಾರದ್ದು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಚಿನ್ನಯ್ಯ ತೋರಿಸಿರುವ ಜಾಗದ ಮಣ್ಣು ಸಂಗ್ರಹಿಸಿ, ಮಣ್ಣು ಹಾಗೂ ಡಿಎನ್ ಎ ಹೊಂದಾಣಿಕೆ ಮಾಡಲು ಎಸ್ ಐಟಿ ಮುಂದಾಗಿದೆ ಎಂದು ತಿಳಿದುಬಂದಿದೆ.