ಧಾರವಾಡ: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಧಾರವಾಡಲ್ಲಿ ನಡೆದಿದೆ.
ಬಿಹಾರ ಮೂಲದ ಅಸ್ಥಿತ್ವ ಗುಪ್ತಾ (23) ಹೃದಯಾಘಾತಕ್ಕೆ ಬಲಿಯಾದ ವಿದ್ಯಾರ್ಥಿ. ಬಿಹಾರ ಮೂಲದ ಅಸ್ಥಿತ್ವ ಗುಪ್ತಾ ಧಾರವಾಡಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದರು. ಎನ್ ಸಿಸಿ ಸೆಲೆಕ್ಷನ್ ವೇಳೆ ಓಡುತ್ತಿದ್ದಾಗ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು.
ಎನ್ ಸಿಸಿ ಕ್ಯಾಂಪಸ್ ನಲ್ಲಿಯೇ ಚಿಕಿತ್ಸೆ ನೀಡಿ ಎರಡು ದಿನಗಳ ಹಿಂದೆ ಧಾರವಾಡದ ಖಾಸಗಿ ಆಸ್ಪತ್ರೆಗೆ ಅಸ್ಥಿತ್ವ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಗದೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.