ಬೆಂಗಳೂರು: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ವಿಚಾರಕ್ಕೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಬಾನು ಮುಷ್ತಾಕ್ ಪ್ರತಿಕ್ರಿಯೆ ನೀಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಬಾನು ಮುಷ್ತಾಕ್, ಯಾರು ಏನು ಮಾತನಾಡುತ್ತಾರೋ ಮಾತನಾಡಲಿ. ನಾನು ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ. ಈ ಹಿಂದೆ ನಾನು ಏನು ಮಾತನಾಡಿದ್ದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ಮಾತನಾಡಲಿ ಎಂದರು.
ಯಾರೋ ವಿರೋಧ ಮಾಡಿದರು ಎಂದು ನಾನು ಉತ್ತರ ಕೊಡಬೇಕಾ? ಮಾತನಾಡುವವರು ಮಾತನಾಡಲಿ, ಸೂಕ್ತ ವೇದಿಯಲ್ಲಿ ನಾನು ಈ ಬಗ್ಗೆ ಉತ್ತರ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ವಿರೋಧಿಸುವವರ ಬಗ್ಗೆ ಸದ್ಯಕ್ಕೆ ಪ್ರತಿಕ್ರಿಯೆ ನೀಡಲ್ಲ. ವಿರೋಧಿಸುವುದು ಅವರ ಸ್ವಾತಂತ್ರ್ಯ. ನಾನು ಅದಕ್ಕೆ ಪ್ರತಿಕ್ರೊಯೆ ಕೊಡಲ್ಲ ಎಂದರು.