ಬೆಂಗಳೂರು : ಧರ್ಮಸ್ಥಳ ಪ್ರಕರಣವನ್ನ ಎನ್ ಐ ಗೆ (NIA) ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಧರ್ಮಸ್ಥಳದ ಅಪಪ್ರಚಾರ ಪ್ರಕರಣದ ತನಿಖೆಯನ್ನ ಎಸ್ ಐ ಟಿ ಸರಿಯಾಗಿ ನಡೆಸುತ್ತಿದೆ. ಆದ್ದರಿಂದ ಎನ್ ಐ ಎ ತಂಡದ ತನಿಖೆ ಅಗತ್ಯವಿಲ್ಲ. ಹೀಗೆ ತನಿಖೆ ಮಾಡಿ, ಹಾಗೆ ತನಿಖೆ ಮಾಡಿ ಎಂದು ಹೇಳಲು ನಾವು ಯಾರ ಎಂದರು. ತನಿಖೆಗೆ ಏನು ಅವಶ್ಯಕತೆ ಬೇಕೋ..ಅದನ್ನ ಪೊಲೀಸರು ಮಾಡುತ್ತಾರೆ ಎಂದರು..ಎಸ್ ಐ ಟಿ ಸರಿಯಾಗಿ ಪ್ರಕರಣದ ತನಿಖೆ ಮಾಡುತ್ತಿದೆ, ಅದನ್ನ ಎನ್ ಐ ಎಗೆ ನೀಡುವ ಅಗತ್ಯವಿಲ್ಲ ಎಂದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ 90% ತನಿಖೆ ಮುಗಿದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ಬಹುತೇಕ ಮುಕ್ತಾಯವಾಗಿದೆ. ಎನ್ ಐಎ ಅಥವಾ ಸಿಬಿಐ ತನಿಖೆ ಅಗತ್ಯವಿಲ್ಲ. ನಮ್ಮ ಪೊಲೀಸರೇ ಸಮರ್ಥವಾಗಿದ್ದಾರೆ ಎಂದು ಹೇಳಿದರು.

