ಒಡಿಶಾ: ರೀಲ್ಸ್ ಮಾಡಲು ಹೋಗಿ ಯೂಟ್ಯೂಬರ್ ಓರ್ವ ದುರಂತಕ್ಕೀಡಾಗಿರುವ ಘಟನೆ ನಡೆದಿದೆ. ಜಲಪಾತದ ನೀರಿನಲ್ಲಿ ಸ್ನೇಹಿತನ ಕಣ್ಮುಂದೆಯೇ ಕೊಚ್ಚಿ ಹೋಗಿದ್ದಾನೆ.
ಓಡಿಶಾದ ಕೊರಾಪುಟ್ ನಲ್ಲಿರುವ ದುಡುಮಾ ಜಲಪಾತದಲ್ಲಿ 22 ವರ್ಷದ ಯೂಟ್ಯೂಬರ್ ಸಾಗರ್ ತುಡು ನೀರಿನಲ್ಲಿ ಕೊಚ್ಚಿ ಹೋಗಿರುವ ಯುವಕ. ಗಂಜಾಂ ಜಿಲ್ಲೆಯ ಬೆರ್ಹಾಂಪುರ ನಿವಾಸಿ.
ತನ್ನ ಸ್ನೇಹಿತ ಅಭಿಜಿತ್ ಬೆಹೆರಾ ಅವರೊಂದಿಗೆ ಕೊರಾಪುಟ್ ಗೆ ಹೋಗಿದ್ದರು. ವಿವಿಧ ಪ್ರವಾಸಿತಾಣಗಳ ವಿಡಿಯೋ ಮಾಡುತ್ತಿದ್ದರು. ಸಾಗರ್ ಜಲಪಾತದ ಬಳಿ ಬಂಡೆಯ ಮೇಲೆ ನಿಂತು ಡ್ರೋನ್ ಕ್ಯಾಮರಾದಲ್ಲಿ ರೀಲ್ಸ್ ರೆಕಾರ್ಡ್ ಮಾಡುತ್ತಿದ್ದರು. ಭಾರಿ ಮಲೆಯಿಂದಾಗಿ ಮಚಕುಂಡ ಅಣೆಕಟ್ಟೆಯಿಂದ ನೀರನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಜಲಪಾತದಲ್ಲಿ ಏಕಾಏಕಿ ನೀರಿನಮಟ್ಟ ಹೆಚ್ಚಾಗಿದೆ. ಇದರಿಂದಾಗಿ ಹಠಾತ್ ನೀರಿನ ರಭಸ ಹೆಚ್ಚಾಗಿದೆ. ಸಾಗರ್ ನಿಂತಿದ್ದ ಬಡ್ಡೆಯ ಮೇಲೆ ಇದ್ದಕ್ಕಿದ್ದಂತೆ ನೀರು ಅಪ್ಪಳಿಸಿದ್ದು, ಸಮತೋಲನ ಕಳೆದುಕೊಂಡ ಸಾಗರ್ ಜಾರಿ ಬಿದ್ದು, ನೀರಿನಲ್ಲಿ ಕೊಚ್ಚ್ಜಿ ಹೋಗಿದ್ದಾರೆ.
ಸ್ಥಳದಲ್ಲಿದ್ದವರು ಅವರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಸಾಗರ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.