ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್ ಜಾಮ್ ಆಗಿರುವ ಹಿನ್ನೆಲೆಯಲ್ಲಿ ಇಂದು ಟಿಬಿ ಡ್ಯಾಂ ಗೆ ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಲಿದೆ. ವಿಪಕ್ಷ ನಾಯಕ ಆರ್. ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕರಾದ ಜನಾರ್ಧನ ರೆಡ್ಡಿ, ಬೈರತಿ ಬಸವರಾಜ್, ಸಿ.ಸಿ. ಪಾಟೀಲ್ ಹಾಗೂ ಸ್ಥಳೀಯ ಬಿಜೆಪಿ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಬಿಜೆಪಿ ನಾಯಕರ ನಿಯೋಗ ಪರಿಶೀಲನೆ ನಡೆಸಲಿದೆ. ತುಂಗಭದ್ರಾ ಜಲಾಶಯದ ಗೇಟ್ 11, 18, 20, 24, 27, 28 ಹಾಗೂ ಕ್ರಸ್ಟ್ ಗೇಟ್ ನಂಬರ್ 4 ಜಾಮ್ ಆಗಿವೆ ಎಂದು ಹೇಳಲಾಗಿದೆ. ಟಿಬಿ ಡ್ಯಾಂ ಗೇಟ್ ಗಳು ಜಾಮ್ ಆಗಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮೂಡಿದೆ. ಬೆಳೆಗಳಿಗೆ ನೀರು ಸಿಗದಿರಬಹುದೆಂಬ ಆತಂಕ ಉಂಟಾಗಿದೆ.