ಕೊಪ್ಪಳ: ಗಣೇಶ ಹಬ್ಬದ ವೇಳೆ ಡಿಜೆ ಬಳಕೆ ಕುರಿತು ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆಸಲಾಗುವುದು. ಈ ವಿಷಯದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ. ಆದರೆ ಡಿಜೆ ನಿಷೇಧ ಮಾಡಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡಿಜೆ ನಿಷೇಧ ಎನ್ನುವ ಬಿಜೆಪಿಯ ಮಾತು ಕೇಳಬೇಡಿ. ಡಿಜೆ ಬಳಕೆಗೆ ಕೋರ್ಟ್ ಮಾರ್ಗಸೂಚಿಯ ಪ್ರಕಾರ ಇಂತಿಷ್ಟು ಡೆಸಿಬಲ್ ಇರಬೇಕು ಎನ್ನುವ ನಿಯಮವಿದೆ. ಆ ಪ್ರಕಾರ ನೋಡಿಕೊಳ್ಳಬೇಕು. ಯುವಕರಿಗೆ 18ನೇ ವರ್ಷಕ್ಕೆ ಮತದಾನದ ಹಕ್ಕು ನೀಡಿದ್ದು ನಮ್ಮ ಕಾಂಗ್ರೆಸ್. ಹೀಗಿರುವಾಗ ನಾವು ಯುವಕರಿಗೆ ಹೇಗೆ ಡಿಜೆ ಬಳಕೆಗೆ ನಿಷೇಧ ಹೇರಲು ಸಾಧ್ಯವೇ ಎಂದು ಹೇಳಿದ್ದಾರೆ.