ಚಾಮರಾಜನಗರ: ಪ್ರೀತಿಸುವಂತೆ ವಿದ್ಯಾರ್ಥಿನಿಯ ಹಿಂದೆ ಬಿದ್ದು ಕೊಲೆ ಬೆದರಿಕೆ ಹಾಕಿದ್ದ ಪಾಗಲ್ ಪ್ರೇಮಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಆಯುಬ್ ಖಾನ್ ಬಂಧಿತ ಆರೋಪಿ. ಮೈಸೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಗೆ ತಾನು ನಿನ್ನ ಸ್ನೇಹಿತೆಯ ಸಹೋದರ ಎಂದು ಸುಳ್ಳು ಹೇಳಿ ಪರಿಚಯ ಮಾಡಿಕೊಂಡಿದ್ದ. ತಾನು ಹಿಂದೂ ಎಂಬಂತೆ ಬಿಂಬಿಸಿಕೊಂಡಿದ್ದ. ವಿಷಯ ತಿಳಿಯುತ್ತಿದಂತೆ ವಿದ್ಯಾರ್ಥಿನಿ ಆತನಿಂದ ದೂರ ಉಳಿದಿದ್ದಳು. ಆದರೆ ಆಯೂಬ್ ಖಾನ್ ಮಾತ್ರ ವಿದ್ಯಾರ್ಥಿನಿಯ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸಲಾರಂಭಿಸಿದ್ದ.
ವಿದ್ಯಾರ್ಥಿನಿ ಆತನ ಪ್ರೀತಿ ನಿರಾಕರಿಸಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದ. ಮನನೊಂದ ವಿದ್ಯಾರ್ಥಿನಿ ಗುಂಡ್ಲುಪೇಟೆ ಠಾಣೆಗೆ ದೂರು ನೀಡಿದ್ದಳು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.