ಕೃಷಿ ಭಾಗ್ಯ ಯೋಜನೆಯಡಿ ಜಮೀನುಗಳಲ್ಲಿ ನಿರ್ಮಿಸುವ ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ತಂತಿ ಬೇಲಿ ಮತ್ತು ಸೂಚನಾ ಫಲಕ ಅಳವಡಿಸಬೇಕು. ಇಲ್ಲದಿದ್ದರೆ ಶೇಕಡ 25ರಷ್ಟು ಅನುದಾನ ಕಡಿತ ಮಾಡಲಾಗುವುದು.
ಕೃಷಿ ಇಲಾಖೆಯಿಂದ ಕೃಷಿ ಚಟುವಟಿಕೆಗಳಿಗಾಗಿ ಕೃಷಿ ಹೊಂಡ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ 45 ಮಕ್ಕಳು ಕೃಷಿಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ವಯಸ್ಕರು ಜಾನುವಾರುಗಳು ಕೂಡ ಮೃತಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
2023 -24 ಮತ್ತು 2024- 25 ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಿಸಿದ ಎಲ್ಲಾ ಫಲಾನುಭವಿಗಳಿಗೆ ಮಾರ್ಗ ಸೂಚಿ ಅನ್ವಯವಾಗಲಿದೆ. ಕೃಷಿಹೊಂಡ ನಿರ್ಮಿಸಿದ ನಂತರ ಸುತ್ತಲೂ ಕಡ್ಡಾಯವಾಗಿ ತಂತಿ ಮೇಲೆ ಅಳವಡಿಸಬೇಕು. ಹಗ್ಗಗಳನ್ನು ಹೊಂಡದಲ್ಲಿ ಬಿಟ್ಟು ಟ್ಯೂಬ್ ಗಳನ್ನು ತೇಲಿ ಬಿಡಬೇಕು. ಸೂಚನಾ ಫಲಕ ಅಳವಡಿಸಬೇಕು ಎಂದು ಹೇಳಲಾಗಿದೆ.