ತುಮಕೂರು: ದೇವಸ್ಥಾನದಲ್ಲಿಯೇ ಅರ್ಚಕನಿಗೆ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯರು, ಯುವಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತುಮಕೂರಿನ ಹೊರವಲಯದ ದೇವರಾಯನದುರ್ಗ ದೇವಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದಲ್ಲಿ ಕುಂಕುಮ ಇಡುವಾಗ ಅನುಚಿತವಾಗಿ ವರ್ತಿಸಿರುವ ಆರೋಪದಲ್ಲಿ ಯುವಕರು, ಮಹಿಳೆಯರು ಅರ್ಚಕನನ್ನು ಹಿಡಿದು ದೊಣ್ಣೆ, ಕೈಗಳಿಂದ ಹೊಡೆದಿದ್ದಾರೆ. ಅರ್ಚಕ ಬಿಟ್ಟು ಬಿಡುವಂತೆ ಕೈ ಮುಗಿದು ಕೇಳಿದರೂ ಬಿಡದೆ ಥಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಅರ್ಚಕ ನಾಗಭೂಷಣ ಆಚಾರ್ಯ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಮೂರ್ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.