ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್ ಐಎ ಗೆ ವಹಿಸಬೇಕು ಎಂದು ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಶ್ವತ್ಥನಾರಾಯಣ, ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವ ಪ್ರಕರಣದ ಬಗ್ಗೆ ಎನ್ ಐಎ ತನಿಖೆ ನಡೆಸಬೇಕು. ವಿದೇಶದಿಂದ ಹಣ ಬಂದಿದೆ ಎಂಬ ಆರೋಪಗಳಿಗೆ ಈ ಬಗ್ಗೆ ತನಿಖೆಯಾಗಬೇಕು ಎಂದರು.
ಈಗಾಗಲೇ ಪ್ರಕರಣದ ಹಿಂದಿರುವ ಕೈವಾಡ ಬಯಲಾಗಿದೆ. ದೂರುದಾರನಿಗೆ ಬೆಂಬಲ ನೀಡಿದವರ ಬಗ್ಗೆಯೂ ತನಿಖೆಯಾಗಲಿ. ಇದರ ಹಿಂದಿರುವವರಾ ಬಗೆ ಎನ್ ಐಎ ತನಿಖೆ ನಡೆಸಿದರೆ ಎಲ್ಲವೂ ಹೊರಬರುತ್ತದೆ ಎಂದು ತಿಳಿಸಿದ್ದಾರೆ.