ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಮಾಸ್ಕ್ ಮ್ಯಾನ್ ನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಗ್ಗೆ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಿರೀಶ್ ಮಟ್ಟಣ್ಣವರ್, ಧರ್ಮಸ್ಥಳ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಬಂಧನವನ್ನು ನಾವು ಕೂಡ ಸ್ವಾಗತಿಸುತ್ತೇವೆ. ಆದರೆ ಪ್ರಕರಣ ಮುಚ್ಚಿಹಾಕುವ ಯತ್ನಗಳು ನಡೆಯುತ್ತಿವೆ ಎಂಬ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದರು.
ಮಾಸ್ಕ್ ಮ್ಯಾನ್ ಬಂಧನ ಒಳ್ಳೆಯ ಬೆಳವಣಿಗೆ. ಷಡ್ಯಂತ್ರ ಏನಾಗಿದೆ ಏನು ಎಂಬುದನ್ನು ಎಸ್ ಐಟಿಯೇ ಬಯಲಿಗೆ ಎಳೆದಿದೆ. ಎಸ್ ಐಟಿ ತನಿಖೆ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಮಾಸ್ಕ್ ಮೆನ್ ನ ಮಂಪರು ಪರೀಕ್ಷೆಯನ್ನೂ ನಡೆಸಬೇಕು. ಆ ಮೂಲಕವಾಗಿ ಎಸ್ ಐಟಿ ಹಾಗೂ ಸರ್ಕಾರ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.
ನಮ್ಮನ್ನು ವಿಚಾರಣೆಗೆ ಕರೆದರೆ ಮಾಸ್ಕ್ ಮ್ಯಾನ್ ಗೂ ನಮಗೂ ಏನು ಸಂಬಂಧ ಏನು ಎಂಬುದನ್ನು ನಾವು ಹೇಳುತ್ತೇವೆ ಎಂದು ಇದೇ ವೇಳೆ ತಿಳಿಸಿದ್ದಾರೆ.