BREAKING :’ನಾನು ಪಾತ್ರಧಾರಿ ಅಷ್ಟೇ , ಸೂತ್ರಧಾರಿಗಳು ಬೇರೆ ಇದ್ದಾರೆ’ : ‘SIT’ ವಿಚಾರಣೆ ವೇಳೆ ಮಾಸ್ಕ್’ಮ್ಯಾನ್ ಸ್ಪೋಟಕ ಹೇಳಿಕೆ.!

ಧರ್ಮಸ್ಥಳ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಇಂದು ದೂರುದಾರ ಮಾಸ್ಕ್ ಮ್ಯಾನ್ ಸಿ.ಎಸ್ ಚಿನ್ನಯ್ಯನನ್ನು ಬಂಧಿಸಿದೆ.

ನಿನ್ನೆಯಿಂದ ಇಂದಿನವರೆಗೆ ಸುದೀರ್ಘ ವಿಚಾರಣೆ ನಡೆಸಿದ ಎಸ್ ಐ ಟಿ ಪೊಲೀಸರು ಇಂದು ಮಾಸ್ಕ್ ಮ್ಯಾನ್ ನನ್ನು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ವಿಚಾರಣೆ ವೇಳೆ ಮಾಸ್ಕ್ ಮ್ಯಾನ್ ಸ್ಪೋಟಕ ಹೇಳಿಕೆ ನೀಡಿದ್ದಾನೆ.

ನಾನು ಪಾತ್ರಧಾರಿ ಅಷ್ಟೇ , ಸೂತ್ರಧಾರಿಗಳು ಬೇರೆ ಇದ್ದಾರೆ. ಅವರು ಹೇಳಿದಂತೆಯೇ ನಾನು ಕೇಳಿದೆ. ಕೋರ್ಟ್ ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ಗೊತ್ತಿಲ್ಲ.. ಎಂದಿದ್ದಾನೆ. ಮಾಸ್ಕ್ ಹಾಕಿಯೇ ಆಸ್ಪತ್ರೆಗೆ ಕರೆದುಕೊಂಡು ಬಂದ ಎಸ್ ಟಿ ಟಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ನಾನು ತೋರಿದ ಜಾಗದಲ್ಲಿ ಮಾತ್ರ ಶೋಧ ನಡೆಸಿ ಎಂದು ಚಿನ್ನಯ್ಯ ಪಟ್ಟು ಹಿಡಿದಿದ್ದನು. ಕೊನೆಗೆ ಅನುಮಾನಗೊಂಡು ಎಸ್ ಐ ಟಿ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read