ಬೆಂಗಳೂರು: ಧರ್ಮಸ್ಥಳ ವಿರುದ್ಧದ ಅತಿ ದೊಡ್ಡ ಷಡ್ಯಂತ್ರ ಬಯಲಾಗಿದೆ. ನನ್ನ ಪುತ್ರಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾರೆ ಎಂದು ಹೇಳಿಕೊಂಡಿದ್ದ ಸುಜಾತಾ ಭಟ್ ನಾನು ಹೇಳಿದ್ದೆಲ್ಲ ಸುಳ್ಳು ಎಂದು ತಿಳಿಸಿದ್ದಾರೆ.
ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್ ಮಾತು ಕೇಳಿ ಸುಳ್ಳು ಹೇಳಿದೆ. ನನ್ನನ್ನು ಬಿಟ್ಟುಬಿಡಿ, ಧರ್ಮಸ್ಥಳ ಭಕ್ತರ ಕ್ಷಮೆ ಕೇಳುತ್ತೇನೆ. ನಾನು ಆಸ್ತಿಗಾಗಿ ಸುಳ್ಳು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ತಾವು ಹೇಳಿಕೆ ನೀಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೆ ಉಲ್ಟಾ ಹೊಡೆದಿದ್ದು, ಒತ್ತಡಕ್ಕೆ ಒಳಗಾಗಿ ಆ ರೀತಿ ಹೇಳಿದ್ದೇನೆ. ನನ್ನನ್ನು ಕಾರ್ ನಲ್ಲಿ ಕೂರಿಸಿಕೊಂಡು ಹೆಸರು ಹೇಳುವಂತೆ ಒತ್ತಡ ಹಾಕಿದ್ದರು. ನನಗೆ ಮಗಳು ಇರುವುದು ನಿಜ. ಅದನ್ನು ತನಿಖಾಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ನನಗೆ ಅನನ್ಯಾ ಬಟ್ ಎಂಬ ಮಗಳೇ ಇಲ್ಲ. ನಾನು ಇದುವರೆಗೂ ಹೇಳಿದ್ದೆಲ್ಲವೂ ಸುಳ್ಳು ಕಟ್ಟುಕತೆಯಾಗಿದೆ. ನನಗೆ ಸುಳ್ಳು ಹೇಳುವಂತೆ ಹೇಳಿ ಕೊಟ್ಟಿದ್ದರು ಎಂದು ಮಾಧ್ಯಮಗಳಿಗೆ ಸುಜಾತಾ ಶುಕ್ರವಾರ ಸಂಜೆ ಸಂದರ್ಶನ ನೀಡಿದ್ದರು. ರಾತ್ರಿ ವೇಳೆಗೆ ತಾವು ಒತ್ತಡಕ್ಕೆ ಒಳಗಾಗಿ ಹೇಳಿಕೆ ನೀಡಿದ್ದೇನೆ ಎಂದು ಮತ್ತೆ ಉಲ್ಟಾ ಹೊಡೆದಿದ್ದಾರೆ.