ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಬಗ್ಗೆ ಸುಳ್ಳು ಮಾಹಿತಿ ನೀಡಿದ ವಕೀಲ ಮಂಜುನಾಥ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಧರ್ಮಸ್ಥಳ ನಿವಾಸಿ ರಘುರಾಮ ಶೆಟ್ಟಿ ಎಂಬುವರು ದೂರು ನೀಡಿದ್ದು ಈ ದೂರನ್ನು ಆಧರಿಸಿ ವಕೀಲ ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಯಥೇಚ್ಛವಾಗಿ ಹೆಣಗಳನ್ನು ಹೂತು ಹಾಕಿದ್ದಾನೆ ಎಂದು ವಕೀಲ ಮಂಜುನಾಥ್ ಮಾಧ್ಯಮ ಪ್ರಕಟಣೆ ನೀಡಿದ್ದರು. ಪಾಯಿಂಟ್ 1ರಲ್ಲಿ 2, ಪಾಯಿಂಟ್ 2ರಲ್ಲಿ 3, ಪಾಯಿಂಟ್ 4 ಮತ್ತು 5ರಲ್ಲಿ ತಲಾ 8 ಹೆಣಗಳು, ಪಾಯಿಂಟ್ 9ರಲ್ಲಿ 6ರಿಂದ 7 ಹೆಣಗಳು, ಪಾಯಿಂಟ್ 13ರಲ್ಲಿ ಯಥೇಚ್ಛವಾಗಿ ಹೆಣಗಳನ್ನು ಹೂತಿದ್ದಾನೆ ಎಂದು ಮಾಧ್ಯಮ ಪ್ರಕಟಣೆ ನೀಡಿದ್ದರು. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆ ಬಗ್ಗೆ ಅನಧಿಕೃತ ಮಾಹಿತಿಗಳನ್ನು ಒಳಗೊಂಡ ಸುಳ್ಳು ಪತ್ರಿಕಾ ಪ್ರಕಟಣೆ ಪ್ರಸಾರ ಮಾಡಿದ ಆರೋಪದ ಮೇಲೆ ವಕೀಲ ಮಂಜುನಾಥ್ ಅವರ ಕೇಸ್ ದಾಖಲಿಸಲಾಗಿದೆ.