ಬೆಂಗಳೂರು: ಸಾಲು ಸಾಲು ಅಪಘಾತಗಳ ಬಳಿಕ ಬಿಎಂಟಿಸಿ ಎಚ್ಚೆತ್ತುಕೊಂಡಿದ್ದು, ಬಿಎಂಟಿಸಿ ಬಸ್, ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಕಟ್ಟು ನಿಟ್ಟಿನ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಬಿಎಂಟಿಸಿ ಬಸ್ ಚಾಲಕರಿಗೆ ಇಂದಿನಿಂದಲೇ ಹೊಸ ನಿಯಮ ಅನ್ವಯವಾಗಲಿದೆ ಎಂದು ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.
ಇನ್ಮುಂದೆ ಬಿಎಂಟಿಸಿ ಬಸ್ ಚಾಲಕರು ವಾಹನ ಓಡಿಸುವಾಗ ಮೊಬೈಲ್ ನಲ್ಲಿ ಮಾತನಾಡಿದರೆ ಸಸ್ಪೆಂಡ್ ಮಾಡಲಾಗುವುದು.
ಮೊದಲ ಸಲ ಅಪಘಾತ ಮಾಡಿದರೆ ಅಂತಹ ಚಾಲಕರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗುವುದು. ಸಸ್ಪೆಂಡ್ ಅವದಿ ಮುಗಿದ ಬಳಿಕ ತರಬೇತಿ ನೀಡಿ ಡ್ಯೂಟಿ ನೀಡಲಾಗುವುದು.
ಎರಡನೇ ಬಾರಿ ಅಪಘಾತ ಮಾಡಿದರೆ ಬಿಎಂಟಿಸಿಯಿಂದಲೇ ವಜಾ ಮಾಡಲಾಗುವುದು.
ಎಲೆಕ್ಟ್ರಿಕ್ ಬಸ್ ಡ್ರೈವರ್ ಗಳು ಡ್ಯೂಟಿ ವೇಳೆ ಫೋನ್ ಬಳಸುವಂತಿಲ್ಲ. ಒಂದು ವೇಳೆ ಫೋನ್ ಬಳಸಿದರೆ 15 ದಿನಗಳ ಕಾಲ ಸಸ್ಪೆಂಡ್ ಮಾಡಲಾಗುವುದು ಹಾಗೂ ಬಸ್ ಕಂಪನಿಗಳಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.