ಬೆಂಗಳೂರು: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಸೇರಿದ ಒಟ್ಟು 30 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋವಾ, ದುಬೈ ನಲ್ಲಿರುವ ಕ್ಯಾಸಿನೋ ಸೆಂಟರ್ ಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ವೀರೇಂದ್ರ ಪಪ್ಪಿ ಹಾಗೂ ಸಹೋದರ ನಾಗರಾಜ್ ಗೆ ಸೇರಿದ ಚಿತ್ರದುರ್ಗದ 6 ಕಡೆಗಳಲ್ಲಿ, ಬೆಂಗಳೂರಿನ 10 ಕಡೆಗಳಲ್ಲಿ ಜೋಧಪುರದ 3 ಕಡೆ, ಹುಬ್ಬಳ್ಳಿಯ 1, ಮುಂಬೈನ 2 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದೇ ವೇಳೆ ಗೋವಾದ 5 ಕ್ಯಾಸಿನೋ ಸೇರಿ 8 ಕಡೆ ಪರಿಶೀಲನೆ ನಡೆಸಲಾಗುತ್ತಿದೆ. ಅಕ್ರಮ ಆನ್ ಲೈನ್, ಆಫ್ ಲೈನ್ ಬೆಟ್ಟಿಂಗ್ ಪ್ರಕರಣ ಹಿನ್ನೆಲೆಯಲ್ಲಿ ಆನ್ ಲೈನ್ ಬೆಟ್ಟಿಂಗ್ ಸೈಟ್ ಗಳಾದ ಕಿಂಗ್ 567, ರಾಜಾ 567, ಪಪ್ಪೀಸ್ 003, ರತ್ನ ಗೇಮಿಂಗ್ ಹಾಗೂ ಸಹೋದರ ತಿಪ್ಪೇಸ್ವಾಮಿಗೆ ಸೇರಿದ ದುಬೈನ 3 ವ್ಯವಹಾರಗಳಾದ ಡೈಮಂಡ್ ಸಾಫ್ಟಕ್, TRS ಟೆಕ್ನಾಲಜಿಸ್, ಪ್ರೈಮ್ 9 ಟೆಕ್ನಾಲಜಿಸ್, ಕಾಲ್ ಸೆಂಟರ್ ಸರ್ವೀಸ್ & ಗೇಮಿಂಗ್ ಬ್ಯುಸಿನೆಸ್ ಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.