BIG NEWS : ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ವಾಲ್ಮೀಕಿ ಸಮುದಾಯದಿಂದ ಅರ್ಜಿ ಆಹ್ವಾನ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ ಯೋಜನೆಗಳು ಕುರಿತ ಮಾಹಿತಿಯನ್ನು ಈ ಕೆಳಕಂಡಂತೆ ನೀಡಲಾಗಿದೆ.

ಸ್ವಯಂ ಉದ್ಯೋಗ ಕಾರ್ಯಕ್ರಮಗಳು : ನೇರಸಾಲ ಯೋಜನೆ-ಕಿರು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ನಿಗಮದಿಂದ ಸಹಾಯಧನ ಮತ್ತು ನೇರಸಾಲ ಮಂಜೂರು ಮಾಡಲಾಗುತ್ತದೆ. ಹೈನುಗಾರಿಕೆ (ಬ್ಯಾಂಕ್‌ಗಳ ಸಹಯೋಗದೊಂದಿಗೆ)-ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ/ಹಸುಗಳಿಗೆ ಘಟಕ ವೆಚ್ಚದ ಶೇ. 50 ರಷ್ಷು ಅಥವಾ ಗರಿಷ್ಟ ರೂ. 1.25ಲಕ್ಷಗಳ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ. ಸ್ವಾವಲಂಬಿ ಸಾರಥಿ (ಬ್ಯಾಂಕ್‌ಗಳ ಸಹಯೋಗದೊಂದಿಗೆ)-ಸರಕು ವಾಹನ / ಟ್ಯಾಕ್ಸಿ (ಹಳದಿ ಬೋರ್ಡ್) ಉದ್ದೇಶದಡಿ ಘಟಕ ವೆಚ್ಚದ ಶೇ. 75 ರಷ್ಟು ಅಥವಾ ಗರಿಷ್ಟ ರೂ. 4 ಲಕ್ಷಗಳ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.

ಉದ್ಯಮ ಶೀಲತಾ ಯೋಜನೆ- (ಬ್ಯಾಂಕ್‌ಗಳ ಸಹಯೋಗದೊಂದಿಗೆ) ಇತರೆ ಉದ್ದೇಶ ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಘಟಕ ವೆಚ್ಚದ ಶೇ.70ರಷ್ಟು ಸಹಾಯಧನ ಅಥವಾ ಗರಿಷ್ಟ ರೂ. 2 ಲಕ್ಷ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ. ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ- (ನೋಂದಾಯಿತ ಸ್ವ-ಸಹಾಯ ಮಹಿಳಾ ಸಂಘದವರಿಗೆ) ಮಹಿಳಾ ಸ್ವಸಹಾಯ ಸಂಘಗಳಿಗೆ (ಕನಿಷ್ಟ 10 ಸದಸ್ಯರು) ಕಿರು ಆರ್ಥಿಕ ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುವುದು. ಘಟಕ ವೆಚ್ಚ ರೂ 5 ಲಕ್ಷಗಳನ್ನು ಮಂಜೂರು ಮಾಡಲಾಗುವುದು. ಇದರಲ್ಲಿ ಸಹಾಯಧನ ರೂ.2.50 ಲಕ್ಷ ಮತ್ತು ಸಾಲ. ರೂ. 2.50 ಲಕ್ಷ (ಶೇಕಡ 4ರಷ್ಟು ಬಡ್ಡಿದರ). ಗಂಗಾ ಕಲ್ಯಾಣ ಯೋಜನೆ- 1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಖುಷ್ಕಿ /ಒಣ ಜಮೀನಿನಲ್ಲಿ ಕೊಳವೆಬಾವಿ ಕೊರೆದು ಪಂಪ್‌ಸೆಟ್ ಅಳವಡಿಸಿ, ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುವುದು ಘಟಕ ವೆಚ್ಚ ರೂ. 3.75 ಲಕ್ಷ ಇದರಲ್ಲಿ ರೂ. 50,000 ಸಾಲವೂ ಸೇರಿರುತ್ತದೆ.

ಭೂ ಒಡೆತನ ಯೋಜನೆ-ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಘಟಕ ವೆಚ್ಚ ರೂ. 20 ಲಕ್ಷ ಸಹಾಯಧನ ರೂ. ಶೇ. 50 ರಷ್ಟು ಸಹಾಯಧನ ಹಾಗೂ ಶೇ.50 ರಷ್ಟು ಸಾಲವಾಗಿರುತ್ತದೆ(ಶೇಕಡ 4ರಷ್ಟು ಬಡ್ಡಿದರ) ಅರ್ಜಿ ಸಲ್ಲಿಸಲು ಸೆ.17 ಕೊನೆಯ ದಿನಾಂಕವಾಗಿದೆ.

2023-24 ಮತ್ತು 2024-25ನೇ ಸಾಲಿನಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವವರು ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಫಲಾಪೇಕ್ಷಿಗಳು ಅನ್‌ಲೈನ್ ಮೂಲಕ ಅರ್ಜಿಗಳನ್ನು ಮತ್ತು ದಾಖಲೆಗಳನ್ನು ನಿಗಮದ ವೆಬ್ ಸೈಟ್ https://sevasindhu.karnataka.gov.in ನೇರವಾಗಿ ಅಥವಾ ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಸಂಸ್ಥೆಗಳ ಸಹಯೋಗದೊಂದಿಗೆ ಸಹ ಅರ್ಜಿ ಸಲ್ಲಿಸಬಹುದು ಹೆಚ್ಚಿನ ವಿವರಗಳಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08172-232344ನ್ನು ಸಂಪರ್ಕಿಸಲು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read