ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತಾರಾಪುರ್-ಬೋಯಿಸರ್ ಕೈಗಾರಿಕಾ ಪ್ರದೇಶದ ಔಷಧ ಕಂಪನಿಯಲ್ಲಿ ಗುರುವಾರ ಸಂಭವಿಸಿದ ಅನಿಲ ಸೋರಿಕೆಯಲ್ಲಿ ನಾಲ್ವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾರಾಪುರ ಎಂಐಡಿಸಿಯ ಔಷಧ ಕಂಪನಿಯಲ್ಲಿ ಹಠಾತ್ ಅನಿಲ ಸೋರಿಕೆಯಾಗಿ ಈ ಅವಘಡ ನಡೆದಿದೆ ಎಂದು ವರದಿಗಳು ಸೂಚಿಸಿದೆ. ಈ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಿಲ ಸೋರಿಕೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Palghar, Maharashtra: An accident occurred at Medley Pharmaceuticals in Boisar Tarapur MIDC, Palghar, after a late-night gas leak. Eight workers were affected and three died while five remain critical and are undergoing treatment at Shinde Hospital, Boisar. Authorities are… pic.twitter.com/a8qFnIh1S6
— IANS (@ians_india) August 21, 2025