HomeLatest News'KSFIC' ಇ-ಕಾಮರ್ಸ್ ಅಂತರ್ಜಾಲ ತಾಣ ಉದ್ಘಾಟಿಸಿದ ಸಚಿವ ಈಶ್ವರ್ ಖಂಡ್ರೆ

‘KSFIC’ ಇ-ಕಾಮರ್ಸ್ ಅಂತರ್ಜಾಲ ತಾಣ ಉದ್ಘಾಟಿಸಿದ ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು : ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ (KSFIC)ದ ಇ-ಕಾಮರ್ಸ್ ಅಂತರ್ಜಾಲ ತಾಣವನ್ನು ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದರು.

1973ರಲ್ಲಿ ಕಂಪನಿಗಳ ಕಾಯಿದೆಯಡಿ ಸ್ಥಾಪನೆಯಾದ ಈ ನಿಗಮವು, ಗುಣಮಟ್ಟದ ಪೀಠೋಪಕರಣ, ಬಾಗಿಲು-ಬಾಗಿಲವಾಡ ಹಾಗೂ ಕಟಕಿ ಉತ್ಪನ್ನಗಳನ್ನು ಸಿದ್ಧಪಡಿಸಿ ಸರ್ಕಾರಿ ಕಟ್ಟಡಗಳು ಹಾಗೂ ಸಾರ್ವಜನಿಕರಿಗೆ ಪೂರೈಕೆ ಮಾಡುತ್ತ ಬಂದಿದೆ. ಈಗ ಡಿಜಿಟಲ್ ಯುಗದ ಅಗತ್ಯಕ್ಕೆ ತಕ್ಕಂತೆ https://www.ksficfurniture.com/ ಮೂಲಕ ನಿಗಮವು ಇನ್ನಷ್ಟು ಜನರಿಗೆ ತಲುಪಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಸರ್ಕಾರಿ ಶಾಲೆಗಳಿಗೆ ಮೇಜು, ಕುರ್ಚಿ, ಬೆಂಚು ಹಾಗೂ ಡೆಸ್ಕ್ ಪೂರೈಕೆ ಮಾಡುವ ಈ ನಿಗಮದ ಕಾರ್ಯ ಈಗ ಇನ್ನಷ್ಟು ಸುಲಭ ಮತ್ತು ಪಾರದರ್ಶಕವಾಗಲಿದೆ.ಈ ಸಂದರ್ಭದಲ್ಲಿ ನಿಗಮದ ಅಧ್ಯಕ್ಷರಾದ ಶಾಸಕ ಗೋಪಾಲಕೃಷ್ಣ ಬೇಲೂರು, ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್. ವೆಂಕಟೇಶನ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಉಪಸ್ಥಿತರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular