ರಾಜಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯ ಮನೆಯ ಮೇಲ್ಛಾವಣಿಯ ಮೇಲೆ ಡ್ರಮ್ ಒಳಗೆ ಮುಚ್ಚಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಕೊಳೆತ ಶವ ಪತ್ತೆಯಾಗಿತ್ತು,ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತಾರಸಿ ಮೇಲೆ ಬಂದಾಗ ಅಲ್ಲಿ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ ಇತ್ತು. ಅದನ್ನು ತೆರೆದು ನೋಡಿದಾಗ ಕೊಳೆತ ಶವವಿತ್ತು.ಕೊಲೆಯಾದವರನ್ನು ಹಂಸರಾಜ್ ಎಂದು ಗುರುತಿಸಲಾಗಿದೆ.
ಬಾಲಕ ಹೇಳಿದಂತೆ ‘’ನನ್ನ ತಾಯಿ ಆಕೆಯ ಪ್ರಿಯಕರನ ಜತೆ ಸೇರಿ ನನ್ನ ಅಪ್ಪನನ್ನು ಕೊಲೆ ಮಾಡಿ ಡ್ರಮ್ನೊಳಗೆ ಹಾಕಿದ್ದಾರೆ ಎಂದಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಹಂಸರಾಜ್ನನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಹಾಗೆಯೇ ಶವ ಕೊಳೆತುಹೋಗಬೇಕೆಂದು ದೇಹದ ಮೇಲೆ ಉಪ್ಪು ಸಿಂಪಡಿಸಿದ್ದರು. ಕೊಲೆ ಮಾಡಿದ ಮಹಿಳೆ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಹಂಸರಾಜ್ ಮೂಲತಃ ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯವರಾಗಿದ್ದರೂ, ಕಿಶನ್ಗಢಬಾಸ್ನ ಆದರ್ಶ ಕಾಲೋನಿ ಪ್ರದೇಶದಲ್ಲಿ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.ನೆರೆಹೊರೆಯವರು ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿತ್ತು. ದೇಹ ಕೊಳೆಯುವುದನ್ನು ವೇಗಗೊಳಿಸಲು ಅದರ ಮೇಲೆ ಉಪ್ಪು ಹಾಕಲಾಗಿತ್ತು” ಎಂದು ಡಿಎಸ್ಪಿ ರಾಜೇಂದ್ರ ಸಿಂಗ್ ನಿರ್ವಾನ್ ಹೇಳಿದ್ದರು.ಹಂಸ್ರಾಮ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಕಳೆದ ಒಂದೂವರೆ ತಿಂಗಳಿನಿಂದ ಆದರ್ಶ ಕಾಲೋನಿಯಲ್ಲಿ ಬಾಡಿಗೆಗೆ ಪಡೆದಿರುವ ಕೋಣೆಯಲ್ಲಿ ವಾಸಿಸುತ್ತಿದ್ದರು.