ಬಾಗಲಕೋಟೆ: ತಿರುಪತಿಯಿಂದ ರೈಲಿನಲ್ಲಿ ಆಗಮಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಲಾದಗಿಯ ಕಟ್ಟಡ ಕಾರ್ಮಿಕ ಯಲ್ಲಪ್ಪ ಅಡಗಲ್ಲ(35) ಮೃತಪಟ್ಟವರು.
ತಿರುಪತಿಗೆ ಹೋಗಿದ್ದ ಯಲ್ಲಪ್ಪ ಇಂದು ಬೆಳಗ್ಗೆ ತಿರುಪತಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದ ನಂದನೂರು ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತಪಟ್ಟ ಯಲ್ಲಪ್ಪ ಅವರ ಮೃತದೇಹ ಇಳಿಸಿಕೊಂಡ ರೈಲ್ವೆ ಪೊಲೀಸರು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಕಲಾದಗಿಗೆ ಮೃತದೇಹ ತರಲು ವ್ಯವಸ್ಥೆ ಮಾಡಲಾಗಿದೆ.