ದುನಿಯಾ ಡಿಜಿಟಲ್ ಡೆಸ್ಕ್ : ಅನಾರೋಗ್ಯ ಪೀಡಿತ ಪತ್ನಿಯನ್ನು ಜೀವಂತ ಸಮಾಧಿ ಮಾಡಲು ವೃದ್ಧನೋರ್ವ ಮುಂದಾಗಿದ್ದು, ಆಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ಕರ್ನಾಟಕದಲ್ಲಿ ನಡೆದಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಆದರೆ ಈ ಘಟನೆ ನಡೆದಿದ್ದು ಬಾಂಗ್ಲಾದೇಶದಲ್ಲಿ ಎಂದು ಕೆಲವು ಮೂಲಗಳು ಸ್ಪಷ್ಟಪಡಿಸಿದೆ.
ವ್ಯಕ್ತಿಯೊಬ್ಬ ತನ್ನ ಅನಾರೋಗ್ಯ ಪೀಡಿತ ಪತ್ನಿಯನ್ನು ಜೀವಂತವಾಗಿ ಹೂಳಲು ಯತ್ನಿಸಿದ್ದಾನೆ ಎಂದು ಹೇಳಲಾದ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಆರೋಪಿ 70 ವರ್ಷದ ಖಲೀಲುರ್ ರೆಹಮಾನ್, ಕಾಕಿಲಕುರಾ ಒಕ್ಕೂಟದ ಖೋಶಾಲ್ಪುರ್ ಕಣಿಪಾರ ಗ್ರಾಮದಲ್ಲಿರುವ ತನ್ನ ಮನೆಯ ಅಂಗಳದಲ್ಲಿ ಗುಂಡಿ ತೋಡಿ, ದೀರ್ಘಕಾಲದಿಂದ ಅಸ್ವಸ್ಥಳಾಗಿದ್ದ ತನ್ನ 65 ವರ್ಷದ ಪತ್ನಿ ಮೋಶಾ ಖೋರ್ಶೆದಾ ಬೇಗಂ ಅವರನ್ನು ಹೂಳಲು ಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಸ್ಥಳೀಯರು ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳು ಈ ಕೃತ್ಯವನ್ನು “ಅಮಾನವೀಯ” ಎಂದು ಬಣ್ಣಿಸಿದ್ದಾರೆ ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳನ್ನು ತಡೆಯಲು ನ್ಯಾಯವನ್ನು ಕೋರಿದ್ದಾರೆ.